ಕೇಂದ್ರ ಸರ್ಕಾರದ ಈಡಿ, ಐಟಿ ಸಿಬಿಐ ದಾಳಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆ

0

ಅಂಬಾನಿ-ಅದಾನಿ ಯನ್ನು ಬಿಟ್ಟು ನಮ್ಮ ರಾಜ್ಯದ ಮಂತ್ರಿಗಳ ಮನೆಗೆ ಈಡಿ ದಾಳಿ ಮಾಡುವುದು ಸರಿಯೇ : ಎಂ.ವೆಂಕಪ್ಪಗೌಡ

ಕೇಂದ್ರ ಬಿಜೆಪಿ ಸರಕಾರ ಗೆದ್ದು ಬಂದ ಸರಕಾರವಲ್ಲ , ಕದ್ದುಬಂದ ಸರಕಾರ :ನಂದರಾಜ್ ಸಂಕೇಶ್

ಕೇಂದ್ರದ ಬಿ ಜೆ ಪಿ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳಾದ ಕೇಂದ್ರದ ಚುನಾವಣಾ ಆಯೋಗ, ಈಡಿ ,ಐಟಿ ಮತ್ತು ಸಿಬಿಐ ಗಳನ್ನು ರಾಜಕೀಯ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಅ.12ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗಿಯ ಸಂಘಟನೆಯ ಮುಖಂಡರುಗಳು ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ಹಾಗೂ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ ವೆಂಕಪ್ಪ ಗೌಡ ಮಾತನಾಡಿ ‘ಕೇಂದ್ರ ಬಿಜೆಪಿ ಸರ್ಕಾರವು ದುರಾಡಳಿತದ ಪರಮಾವಧಿಯನ್ನು ಮೀರಿಕೊಂಡು ಹೋಗುತ್ತಿದೆ. ವಿರೋಧ ಪಕ್ಷವನ್ನು ಹೇಗಾದರೂ ಮಾಡಿ ಕಟ್ಟಿ ಹಾಕಬೇಕೆಂಬ ಕೆಟ್ಟಚಾಳಿಯನ್ನು ಮುಂದುವರೆಸಿಕೊಂಡು ಬರುತ್ತಿರುವ ಇವರು ಕರ್
ನಮ್ಮ ರಾಜ್ಯದ ಸಚಿವರಾದ ಸತೀಶ್ ಜಾರಕಿಹೊಳಿ ರವರ ಮನೆಗೆ ಈಡಿ ದಾಳಿಯನ್ನು ಮಾಡಿಸಿದ್ದಾರೆ. ಇವರಿಗೆ ಕೇವಲ ಕಾಂಗ್ರೆಸ್ ಪಕ್ಷದ ನಾಯಕರುಗಳು ಮಾತ್ರ ಈ
ಇಂತಹ ಗಾಡಿಗಳಿಗೆ ಸಿಗುವುದೇ.? ಕೇಂದ್ರ ಸರಕಾರ ಬೆಳಸಿಕೊಂಡು ಬಂದಿರುವ ಅದಾನಿ ಅಂಬಾನಿಯವರು ಏಕೆ ಇವರ ಕಣ್ಣಿಗೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದರು.

ಕರ್ನಾಟಕ ರಾಜ್ಯ ಮುಗೇರ ಸಂಘದ ಅಧ್ಯಕ್ಷರಾದ ನಂದರಾಜ್ ಸಂಕೇಶ್ ರವರು ಮಾತನಾಡಿ ‘ಕೇಂದ್ರ ಬಿಜೆಪಿ ಸರಕಾರವು ಗೆದ್ದು ಬಂದ ಸರ್ಕಾರವಲ್ಲ ಕದ್ದು ಬಂದ ಸರ್ಕಾರ ಎಂದು ವ್ಯಂಗ್ಯ ಮಾಡಿದರು. ಓಟ್ ಚೋರಿ, ಈಡಿ ದಾಳಿ ಐಟಿ ದಾಳಿ ಎಂಬಿತ್ಯಾಧಿ ಕುತಂತ್ರದ ಮೂಲಕ ಬಂದಿರುವ ಬಿಜೆಪಿ ಕೇಂದ್ರ ಸರ್ಕಾರ ದೇಶದ ಜನರ ಮೇಲೆ ದೌರ್ಜನ್ಯವನ್ನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಬಿಜೆಪಿ ಮೈತ್ರಿಕೂಟ ಸರಕಾರವು ವಿರೋಧ ಪಕ್ಷಗಳ ಜನ ಪ್ರತಿನಿಧಿಗಳ ಮೇಲೆ ಮಾತ್ರ ಐಟಿ ಮತ್ತು ಸಿಬಿಐ ಸಂಸ್ಥೆಗಳಿಂದ ರಾಜಕೀಯ ಕಾರಣಕ್ಕಾಗಿ ದಾಳಿ ನಡೆಸಿ ಅವರ ರಾಜಕೀಯ ನೈತಿಕತೆ ಬಲವನ್ನು ಕುಗ್ಗಿಸುವ ಯತ್ನದಲ್ಲಿ ಮಗ್ನರಾಗಿದ್ದಾರೆ ಎಂದು ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಮಹೇಶ್ ಬೆಳ್ಳಾರ್ಕರ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಅಲ್ಲದೆ ಸಂಘಟನೆಯ ಮಡಿಕೇರಿ ತಾಲೂಕು ಸಮಿತಿಯ ಸಂಚಾಲಕರಾದ ಹರೀಶ್ ಪೆರಾಜೆ, ಮೈಸೂರು ವಿಭಾಗದ ಸಂಚಾಲಕರಾದ ಆನಂದ ಬೆಳ್ಳಾರೆ, ಸುಳ್ಯ ತಾಲೂಕು ಸಮಿತಿಯ ಸಂಚಾಲಕರಾದ ಅಚ್ಚುತಾ ಮಲ್ಕಾಜೆ ಮೊದಲಾದವರು ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

ಬಳಿಕ ಸುಳ್ಯ ತಾಲೂಕು ತಹಶೀಲ್ದಾರ್ ರವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಮುಖ್ಯಸ್ಥರುಗಳಾದ ಶಿವಪ್ಪ ಕುಂಬ್ರಾ, ಹರೀಶ್ ಕುಂಬ್ರಾ, ಶೇಷಪ್ಪ ಪರ್ಪುಂಜ, ಬಾಬು ಕನಕ ಮಜಲು, ಆನಂದ ಕೆಂಬಾರೆ, ಸುರೇಶ್ ಪೆರಾಜೆ, ಮಲ್ಲ ಮುಡಾಯಿತೋಟ, ಕುಶಾಲ ಮುಡಾಯಿ ತೋಟ, ನವೀನ ಮುಡಾಯಿತೋಟ, ಹಾಗೂ ಸಂಘಟನೆಯ ಅನೇಕ ಮಂದಿ ಕಾರ್ಯಕರ್ತರುಗಳು ಭಾಗವಹಿಸಿದ್ದರು.

ಬಳಿಕ ಸಂಘಟನೆಯ
ವತಿಯಿಂದ ಸುಳ್ಯ ತಹಶೀಲ್ದಾರ್ ಮೂಲಕ ರಾಷ್ಟ್ರಪತಿ ಯವರಿಗೆ ಮನವಿಯನ್ನು ಮಾಡಿ
‘ ಸಂಘಟನೆಯು ಸಂವಿಧಾನಾತ್ಮಕ ಸಂಸ್ಥೆಗಳ ಸ್ವಾಯುತ್ತತೆ ಮತ್ತು ಸರ್ಕಾರದ ಪಾರದರ್ಶಕತೆಯನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಪ್ರತಿಭಟನೆಯನ್ನು ಕೈಗೊಂಡಿದ್ದೇವೆ.

ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯಲ್ಲಿ ಪ್ರಜಾಪ್ರಭುತ್ವ ವಿರೋಧಿ ಧೋರಣೆ ತೋರುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಅವರು ಕೂಡಲೇ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕು.

ಈಡಿ ಐಟಿ ಸಿಬಿಐ ಇಲಾಖೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಮತ್ತು ಹಿತಾಶಕ್ತಿಗಾಗಿ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದು ಜನವಿರೋಧಿ ಕೃತ್ಯವಾಗಿದೆ ಎಂಬಿತ್ಯಾದಿ ಅಂಶಗಳನ್ನು ಉಲ್ಲೇಖಿಸಿ ಮನವಿ ಮೂಲಕ ತಮ್ಮ ಹಕ್ಕೋತ್ತಾಯವನ್ನು ಮಾಡಿದರು.