ಅ. 21ರ ತನಕ ಕೇನ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಕೇನ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ. 11ರಂದು ಆರಂಭಗೊಂಡಿದ್ದು, ಅ. 21ರ ತನಕ ನಡೆಯಲಿದೆ. ಉತ್ಸವದ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ಪ್ರತಿದಿನ ಸಂಜೆ 6.00 ಗಂಟೆಯಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.


ಅ. 11ರಂದು ನವರಾತ್ರಿ ಪೂಜಾರಂಭಗೊಂಡಿತು. ಬೆಳಿಗ್ಗೆ ಗಣಪತಿ ಹವನ, ಸಾಮೂಹಿಕ ದೇವತಾ ಪ್ರಾರ್ಥನೆ ನಡೆಯಿತು. ಸಂಜೆ ಶ್ರೀ ದುರ್ಗಾಪರಮೇಶ್ವರೀ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ತಂಡ ಕೇನ್ಯ ಹಾಗೂ ಶ್ರೀ ತ್ರಿಶೂಲಿನೀ ಕುಣಿತ ಭಜನಾ ತಂಡ ಬೀದಿಗುಡ್ಡೆ ಕಾಂಜಿ ಇವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು. ಅ. 13ರಂದು ರಾತ್ರಿ ಸಾಮೂಹಿಕ ದುರ್ಗಾಪೂಜೆ, ಅ. 14ರಂದು ಬೆಳಿಗ್ಗೆ ತೆನೆ ತುಂಬಿಸುವುದು ಹಾಗೂ ಗಣಪತಿ ದೇವರಿಗೆ ಅಪ್ಪಕಜ್ಜಾಯ ಸೇವೆ ನಡೆಯಲಿದೆ. ಅ.‌14ರಂದು ಬೆಳಿಗ್ಗೆ ಶ್ರೀ ನಾಗದೇವರಿಗೆ ಪಂಚಾಮೃತ ಅಭಿಷೇಕ ಮತ್ತು ನಾಗತಂಬಿಲ, ಅ. 16ರಂದು ರಾತ್ರಿ ಸಾಮೂಹಿಕ ರಂಗಪೂಜೆ ನಡೆಯಲಿದೆ. ಅ. 20ರಂದು ಮಧ್ಯಾಹ್ನ 12.30ರಿಂದ ಆಯುಧಪೂಜೆ, ಅ. 21ರಂದು ಬೆಳಿಗ್ಗೆ ಗಂಟೆ 9-00ರಿಂದ ಶ್ರೀ ವಿಷ್ಣು ದೇವರಿಗೆ ಹಾಲು ಪಾಯಸ,‌ ಶ್ರೀ ಆಂಜನೇಯ ಸ್ವಾಮಿಗೆ ಅಲಂಕಾರ ಪೂಜೆ,
ಮಧ್ಯಾಹ್ನ ಗಂಟೆ 12-30 ರಿಂದ
ಅಕ್ಷರಾಭ್ಯಾಸ, ಮಹಾಪೂಜೆ, ಪ್ರಸಾದ ವಿತರಣೆ, ನವಾನ್ನ ಬೋಜನ ನಡೆಯಲಿರುವುದಾಗಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಗಿರಿನಾಥ ಶೆಟ್ಟಿ ಕೇನ್ಯಗುತ್ತು ತಿಳಿಸಿದ್ದಾರೆ.