4 ಚಿನ್ನ 5 ಬೆಳ್ಳಿ ಪಡೆದುಕೊಂಡ ಸುಳ್ಯದ ಮಹಿಳಾ ಸಿಬ್ಬಂದಿಗಳು
ಮಂಗಳೂರಿನಲ್ಲಿ ನಡೆದಂತಹ 26/27 ನೇ ಸಾಲಿನ ವಾರ್ಷಿಕ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸುಳ್ಯ ಗೃಹರಕ್ಷಕ ದಳ ಘಟಕದಿಂದ ಸಿಬ್ಬಂದಿಗಳು ಭಾಗವಹಿಸಿ
4 ಚಿನ್ನ ಹಾಗು 5 ಬೆಳ್ಳಿ ಪದಕಗಳನ್ನು ಪಡೆದು ಕೊಂಡಿದ್ದಾರೆ.














ಸುಳ್ಯ ಗೃಹರಕ್ಷಕ ದಳದ ಮಹಿಳಾ ಸಿಬ್ಬಂದಿಗಳಾದ ರಮ್ಯಾ, ನಳಿನಿ,ಚೈತ್ರಾ ಇವರುಗಳು ಕ್ರೀಡಾಕೂಟದಲ್ಲಿ 100 ಮೀಟರ್ ಓಟ, 400 ಮೀಟರ್ ಓಟ, 800 ಮೀಟರ್ ಓಟ, ಹಗ್ಗ ಜಗ್ಗಾಟ, ಗುಂಡೆಸತ, ಹಾಗೂ ಪ್ರಥಮ ಚಿಕಿತ್ಸೆ ವಿಭಾಗದಲ್ಲಿ ಈ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಘಟಕದ ಗೃಹರಕ್ಷಕಿಯವರ ಈ ಸಾಧನೆಗೆ ಘಟಕಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.







