ಸ್ಮರಣಾರ್ಥ ಪಾರ್ಥ ಸಾರಥಿ ಟ್ರಾವೆಲ್ಸ್ ನಲ್ಲಿ ಉಚಿತ ಪ್ರಯಾಣ
ಅಮರಮುಡ್ನೂರು ಗ್ರಾಮದ ಪುಳಿಮಾರಡ್ಕದ ನಿವಾಸಿ ದಿ.ಕೃಷ್ಣಪ್ಪ ಗೌಡ ರವರ ಪುತ್ರ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಕ್ಕು ಜಡ್ಕ ಇದರ ಮಾಜಿ ಅಧ್ಯಕ್ಷರಾದ ರಾಘವೇಂದ್ರ ಪುಳಿಮಾರಡ್ಕ ರವರು ಸೆ.29 ರಂದು ನಿಧನರಾಗಿದ್ದು,ಮೃತರ ಉತ್ತರ ಕ್ರಿಯಾಧಿ ಶುದ್ಧ ಕಾರ್ಯಕ್ರಮ ಅ.9 ರಂದು ನಡೆದು, ವೈಕುಂಠ ಸಮಾರಾಧನೆ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ನುಡಿನಮನವು ಅ.14 ರಂದು ಪುಳಿಮಾರಡ್ಕ ಮನೆಯಲ್ಲಿ ನಡೆಯಿತು.















ಮೃತರ ಕುರಿತು ಶಿಕ್ಷಕ ನಾರಾಯಣ ಬೊಳ್ಳೂರು ರವರು ಮಾತನಾಡಿ” ರಾಘವೇಂದ್ರ ರವರು ರಾಜಕೀಯ, ಧಾರ್ಮಿಕ, ಸಹಕಾರಿಕ್ಷೇತ್ರದಲ್ಲಿಗುರುತಿಸಿಕೊಂಡುಜನಾನುರಾಗಿಯಾಗಿದ್ದರು. ಫಲಾಪೇಕ್ಷೆಯಿಲ್ಲದೆ ಎಲ್ಲಾ ವರ್ಗದ ಮನೆಯವರಲ್ಲಿ ನಡೆಯುವಕಾರ್ಯಕ್ರಮಗಳಿಗೆ ಪಾಕತಜ್ಞರಾಗಿದ್ದು ಅಡುಗೆಯನ್ನು ಉಚಿತವಾಗಿ ಮಾಡಿಕೊಡುತ್ತಿದ್ದ ನಿಸ್ವಾರ್ಥ ಸೇವಕರಾಗಿ ಮನೆಮಾತಾಗಿದ್ದವರು ಎಂದು ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ
ಮೃತರ ಪುತ್ರ ಪುನೀತ್ ಪುಳಿಮಾರಡ್ಕ, ಪುತ್ರಿ ಶಿಕ್ಷಕಿ ಶ್ರೀಮತಿ ಹರ್ಷಿತಾ, ಸಹೋದರರಾದ ಕರುಣಾಕರ ಪುಳಿಮಾರಡ್ಕ, ಜಯರಾಮ ಪುಳಿಮಾರಡ್ಕ, ಸಹೋದರಿಯರಾದ ಶ್ರೀಮತಿ ಜಯಶೀಲಾ,ಶ್ರೀಮತಿ ಶಾರದಾ, ಶ್ರೀಮತಿ ಸರೋಜಾ, ಸೊಸೆ ಶ್ರಾವ್ಯಪುನೀತ್, ಅಳಿಯ ಸುಧೀರ್ ನೇರಳ ಪಂಜ ಮತ್ತು ಮೊಮ್ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು.
ಪಾರ್ಥ ಸಾರಥಿ ಟ್ರಾವೆಲ್ಸ್ ನಿಂದ ಉಚಿತ ಪ್ರಯಾಣ:

ಪಾರ್ಥ ಸಾರಥಿ ಟ್ರಾವೆಲ್ಸ್ ವತಿಯಿಂದ ಕುಕ್ಕುಜಡ್ಕ ಚೊಕ್ಕಾಡಿ,ಸುಳ್ಯ ಕಡೆಗೆ ಮತ್ತು ಕುಕ್ಕುಜಡ್ಕ, ಚೊಕ್ಕಾಡಿ ಬೆಳ್ಳಾರೆಗೆ ಸಂಚರಿಸುವ ಎರಡು ವ್ಯಾನ್ ಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಮೃತರ ಸ್ಮರಣಾರ್ಥವಾಗಿ ಒಂದು ದಿನ ಉಚಿತ ಪ್ರಯಾಣ ಕಲ್ಪಿಸಲಾಗಿತ್ತು.







