ದಶಕಗಳಿಂದ ವಿದ್ಯುತ್ ಸೌಲಭ್ಯಗಳಿಂದ ವಂಚಿತವಾಗಿದ್ದ ಈ ಭಾಗದ ಸುಮಾರು ೨೯ ಕುಟುಂಬಗಳ ಪೈಕಿ, ತಾತ್ಕಾಲಿಕ ಸೌರ ವಿದ್ಯುತ್ ಸಂಪರ್ಕಕ್ಕೆ ಬೇಡಿಕೆ ಸಲ್ಲಿಸಿದ ಸುಮಾರು ೨೨ ಕುಟುಂಬಗಳಿಗೆ, ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣ ರವರ ಸೂಚನೆಯಂತೆ, ಅರಣ್ಯ ಇಲಾಖೆಯ ಮುಖಾಂತರ ಸೋಲಾರ್ ಅಳವಡಿಕೆ ಕಾಮಗಾರಿಗೆ, ಕಮಲ ಬದಿಕೋಡಿರವರ ಮನೆಗೆ ಅಳವಡಿಸುವುದರ ಮೂಲಕ ಚಾಲನೆ ನೀಡಲಾಯಿತು.
ಇನ್ನುಳಿದ ಮನೆಗಳಿಗೆ ನಿರಂತರವಾಗಿ ಅಳವಡಿಸಲಾಗುವುದು.














ಮಾನ್ಯ ಶಾಸಕರಾದ ಪೊನ್ನಣ್ಣ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ರವರ ಸೂಚನೆಯಂತೆ ಅವರ ಅನುಪಸ್ಥಿತಿಯಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಸಂಪಾಜೆ ವಲಯ ಅರಣ್ಯ ಅಧಿಕಾರಿ ಶ್ರೀಮತಿ ಡಿನ್ಸಿ ದೇಚಮ್ಮ ಹಾಗೂ ಸಿಬ್ಬಂದಿ ವರ್ಗದವರು, ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಸೂರಜ್ ಹೊಸೂರು ಮತ್ತು ಸ್ಥಳೀಯ ಪ್ರಮುಖರು, ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಲಯ ಅರಣ್ಯಾಧಿಕಾರಿ ಶ್ರೀಮತಿ ದೇಚಮ್ಮರವರು ಮಾತನಾಡಿ, ಮಾನ್ಯ ಶಾಸಕರು ಈ ಹಿಂದೆ ತಮಗೆ ಸೂಚಿಸಿದಂತೆ ಸೋಲಾರ್ ವ್ಯವಸ್ಥೆ ಕಲ್ಪಿಸಲು ಅರಣ್ಯ ಇಲಾಖೆಯೊಂದಿಗೆ ಮಾತನಾಡಿ ಸರಕಾರ ನೀಡಿದ ಈ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ನೀಡುತ್ತಿರುವುದಾಗಿ ಹಾಗೂ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ತಿಳಿಸಿದರು.

ಕೊಲ್ಯದ ಗಿರೀಶ್ ಮಾತನಾಡಿ, ಮಾನ್ಯ ಶಾಸಕರು ಹಾಗೂ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಅವರ ಪರವಾಗಿ ತಾನು ಇಲ್ಲಿಗೆ ಆಗಮಿಸಿದ್ದು, ಶಾಸಕರು ವಿಶೇಷ ಕಾಳಜಿಯಿಂದ ನೀಡಿದ ಈ ಸೌಲಭ್ಯ ಪ್ರತಿಯೊಬ್ಬರಿಗೂ ತಲುಪುವಂತಾಗಲಿ ಎಂದು ಹಾರೈಸಿದರು.
ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು ಮಾತನಾಡಿ, ೨೦೧೨ ರಲ್ಲಿ ಅಂದಿನ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ, ದಬ್ಬಡ್ಕ ಬಾಗದ ೨೮ ಮನೆಗಳಿಗೆ ವಿದ್ಯುತ್ ಸಂಪರ್ಕ ಬಾಕಿಯಾಗಿದ್ದು, ಅದೇ ಸಮಸ್ಯೆ ಇಂದಿನವರೆಗೂ ಮುಂದುವರಿಯುತ್ತಾ ಬಂದಿದೆ. ಇದನ್ನು ಮನಗಂಡ ಇಂದಿನ ಶಾಸಕ ಪೊನ್ನಣ್ಣರವರು, ಸರ್ಕಾರದೊಂದಿಗೆ ಮಾತನಾಡಿ ವಿದ್ಯುತ್ ಸಂಪರ್ಕಕ್ಕೆ ಅನುಮತಿ ದೊರಕುವವರೆಗೆ ಜನರಿಗೆ ಅನುಕೂಲ ಆಗಲಿ ಎಂದು ವಿಶೇಷ ಪ್ರಯತ್ನವಾಗಿ ಸೌರ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲು ಪ್ರಯತ್ನಿಸಿದ್ದಾರೆ ಹಾಗೂ ಇದನ್ನು ಜನಸಾಮಾನ್ಯರು ಉಪಯೋಗಿಸಿಕೊಂಡು ಮುಂದಿನ ದಿನಗಳಲ್ಲಿ ಸರಕಾರ ಹಾಗೂ ಕೇಂದ್ರ ಅನುಮತಿ ನೀಡಿದ ಸಂದರ್ಭದಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸೂರಜ್ ಹೊಸೂರು ಮಾತನಾಡಿ, ಬೆಳಕಿಲ್ಲದ ಮನೆಗಳಿಗೆ ಬೆಳಕು ಕಲ್ಪಿಸಲು ವಿಶೇಷ ಪ್ರಯತ್ನ ಮಾಡಿದ ಮಾನ್ಯ ಶಾಸಕರಿಗೆ ಹಾಗೂ ನಮ್ಮೊಂದಿಗೆ ಸದಾ ಬೆಂಬಲವಾಗಿ ನಿಲ್ಲುತ್ತಾ ಬಂದಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪರವರಿಗೆ, ಜನರೊಂದಿಗೆ ಸಮಸ್ಯೆ ಬಗೆಹರಿಸಲು ಸಹಕರಿಸಿದ ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು ರವರಿಗೆ, ಶಾಸಕರ ಆದೇಶಕ್ಕೆ ಸ್ಪಂದಿಸಿ ಸೌರ ವಿದ್ಯುತ್ ಕಲ್ಪಿಸಿದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ, ಚೆಂಬು ವಲಯ ಕಾಂಗ್ರೆಸ್ಸಿನ ಹಾಗೂ ದಬ್ಬಡ್ಕದ ಎಲ್ಲಾ ಪ್ರಮುಖ ನಾಯಕರಿಗೆ ಹಾಗೂ ಸಾರ್ವಜನಿಕರಿಗೆ ವಿಶೇಷವಾದ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಪಕ್ಷದ ಮಾಜಿ ವಲಯ ಅಧ್ಯಕ್ಷರು ಹಾಗೂ ಹಿರಿಯ ನಾಯಕರಾದ ಸೋಮಣ್ಣ ಬಾಲಂಬಿ, ಹಿರಿಯರಾದ ಬಂಗಾರಕೋಡಿ ವೆಂಕಟರಮಣ, ರಘುನಾಥ್ ಬಾಲಂಬಿ, ಮಾಣಿಕಲ್ಲು ವಿನಯ, ಹರ್ಷಿತ್ ಚೆಂಡೆಡ್ಕ, ಉದಯ ಹೊದ್ದಟ್ಟಿ, ಕೊಪ್ಪದ ಶಿವರಾಮ, ಕೊಪ್ಪದ ಭುವನೇಶ್ವರ, ಹೊಸೂರು ಗಿರೀಶ್, ಕೆದಂಬಾಡಿ ಗಿರೀಶ್, ಬಂಗಾರಕೋಡಿ ವಿಕಿ ಹಾಗೂ ಗ್ರಾಮಸ್ಥರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು. ಹೊಸೂರು ಗಿರೀಶ್ ವಂದಿಸಿದರು.







