













ಸಾಮಾಜಿಕ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಹಲವಾರು ಜನಪರ ಕಾರ್ಯಕ್ರಮಗಳೊಂದಿಗೆ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಉಮ್ಮರ್ ಬೀಜದಕಟ್ಟೆಯವರ ಸಂಸ್ಥೆ ಸಜ್ಜನ ಪ್ರತಿಷ್ಠಾನ ಇದರ ಹತ್ತನೆ ವಷಕ್ಕೆ ಪಾದಾರ್ಪಣೆ ಪ್ರಯುಕ್ತ ಸಜ್ಜನ ದಶ ಸಂಭ್ರಮಕ್ಕೆ ಚಾಲನೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅ.14 ರಂದು ಬೆಂಗಳೂರಿನ ಕುಂದಳಹಳ್ಳಿ ಇಂಪಿರಿಯಾ ಸಭಾಂಗಣದಲ್ಲಿ ನಡೆಯಿತು.
ದಶ ಸಂಭ್ರಮ ಕಾರ್ಯಕ್ರಮಕ್ಕೆ ಹಿರಿಯ ಮಾನವ ಅಭಿವೃದ್ಧಿ ಸಂಪನ್ಮೂಲ ಅಧಿಕಾರಿ ಇಸ್ಮಾಯಿಲ್ ಝರ ಚಾಲನೆ ನೀಡಿದರು.
ಸಜ್ಜನ ಪ್ರತಿಷ್ಠಾನ ಬೆಂಗಳೂರು,ಸುಳ್ಯ, ಯುಎಇ ಘಟಕಗಳ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ ಸಜ್ಜನ ಕಳೆದ ಹತ್ತು ವರ್ಷಗಳಿಂದ ಪ್ರತಿಷ್ಠಾನ ಸಮಾಜಕ್ಕೆ ನೀಡಿದ ಭರವಸೆಯನ್ನು ಸಂಪೂರ್ಣವಾಗಿ ಈಡೆರಿಸಿದ್ದೇವೆ ಹತ್ತು ವರ್ಷಗಳಲ್ಲಿ ನಮ್ಮ ಸಂಸ್ಥೆಮಾಡಿದ ಸಾರ್ವಜನಿಕ ಸಮಾಜ ಸೇವೆ ನಮಗೆ ತೃಪ್ತಿ ನೀಡಿದೆ ಮುಂದಿನ ಒಂದು ವರ್ಷದಲ್ಲಿ ಹಲವಾರು ಯೋಜನೆಗಳು ನಮ್ಮ ಮುಂದೆ ಇದೆ ಅದನ್ನು ಈಡೇರಿಸಲು ನಿಮ್ಮ ಸಹಕಾರ ಅತ್ಯಗತ್ಯ ಎಂದವರು ತಿಳಿಸಿದರು.
ಸಜ್ಜನ ಪ್ರತಿಷ್ಠಾನ ನಿರ್ದೇಶಕ ರಹೀಂ ಬೀಜದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಶಿಹಾಬ್ ಕೂರ್ನಡ್ಕ ಕಾರ್ಯಕ್ರಮ ಆಯೋಜಿಸಿದರು.
ಸಜ್ಜನ ದುಬೈ ಘಟಕದ ಉಪಾಧ್ಯಕ್ಷ ರಾಶೀದ್, ಸಂಶುದ್ದೀನ್ ಹಾಸನ್,ಸಿದ್ದೀಕ್ ದೊಡ್ಡತೋಟ,ಹನೀಫ್ ದೊಡ್ಡಡ್ಕ,ಅಮಾನ್ ಪರ್ಲಡ್ಕ,ಮಾಜೀನ್ ಬೀಜದಕಟ್ಟೆ, ಮರ್ಝೂಕ್ ಕಡೆಪಾಲ,ಅನ್ಸೀಫ್ ಪೇರಡ್ಕ ಈ ಸಂದರ್ಭದಲ್ಲಿ ಇದ್ದರೂ







