ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಸೀಟು ಪಡೆಯಲು ನಡೆದ ನೀಟ್ ಪರೀಕ್ಷೆಯಲ್ಲಿ ಚೊಕ್ಕಾಡಿಯ ಅಭಿಜಿತ್ ಕೊಂಡೆಬಾಯಿ ರಾಜ್ಯದಲ್ಲಿ 1400ನೇ ರ್ಯಾಂಕ್ ಗಳಿಸಿದ್ದಾರೆ.
22.05 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ಆಲ್ ಇಂಡಿಯಾ ರ್ಯಾಂಕಿಂಗ್ ಪಟ್ಟಿಯಲ್ಲಿ 28,935 ಮತ್ತು Category Rank 13,932 ಗಳಿಸಿದ್ದಾರೆ.














ವೈದ್ಯಕೀಯ ಪದವಿ ಶಿಕ್ಷಣಕ್ಕೆ ಕೊಡಗು ಸರ್ಕಾರಿ ಮೆಡಿಕಲ್ ಕಾಲೇಜಿಗೆ ಇವರು ಆಯ್ಕೆಯಾಗಿದ್ದಾರೆ.
ಅಭಿಜಿತ್ ಪ್ರಾಥಮಿಕ ಶಿಕ್ಷಣವನ್ನು ಸುಳ್ಯದ ರೋಟರಿ ವಿದ್ಯಾಸಂಸ್ಥೆಯಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಚೊಕ್ಕಾಡಿಯ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪೂರೈಸಿದ್ದಾರೆ.
ಇವರು ಅಮರಪಡ್ನೂರು ಗ್ರಾಮದ ಹಿರಿಯಡ್ಕ, ಕೊಂಡೆಬಾಯಿ ಮನೆಯ ಶಾಮಯ್ಯ ಕೆ. ಕೊಂಡೆಬಾಯಿ ಮತ್ತು ಶ್ರೀಮತಿ ಶಶಿಕಲಾ ದಂಪತಿಗಳ ಪುತ್ರ. ಸಹೋದರಿ ಸಿಂಚನಾ ಕೆ. ಅವರು ಕೊಡಗು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವೈದ್ಯಕೀಯ ಶಿಕ್ಷಣವನ್ನು ಮಾಡುತ್ತಿದ್ದಾರೆ.







