ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಅಂಗನವಾಡಿಯಲ್ಲಿ ಗಣಪತಿ ಹವನ ಮತ್ತು ಶಾರದಾ ಪೂಜೆ ಕಾರ್ಯಕ್ರಮ ಇಂದು (ಅ. 15) ನಡೆಯಿತು.














ರೆಂಜಾಳ ಕ್ಷೇತ್ರದ ಪ್ರಧಾನ ಅರ್ಚಕ ಸುಬ್ರಮಣ್ಯ ಭಟ್ ಬಳ್ಳಕ್ಕಾನ ಪೂಜಾ ಕಾರ್ಯಕ್ರಮ ನಡೆಸಿದರು.
ಪೋಷಕರು ಹಾಗೂ ವಿದ್ಯಾಭಿಮಾನಿಗಳು ಭಜನಾ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶೀಲಾವತಿ ಬೊಳ್ಳಾಜೆ, ಬಾಲವಿಕಾಸ ಸಮಿತಿ ಅಧ್ಯಕ್ಷೆ ವನಿತಾ ಬೊಳ್ಳಾಜೆ, ಸುಳ್ಯ ವಿವೇಕಾ ಜಾಗೃತ ಬಳಗದ ಅಧ್ಯಕ್ಷೆ ಶ್ಯಾಮಲಾ ಎ.ವಿ., ಬೊಳ್ಳಾಜೆ ಅಂಚೆ ಪಾಲಕ ಕೇಶವ ಬಿ. ಕೊಡಪಾಲ, ಕಾರ್ಯಕರ್ತೆ ದೇವಕಿ, ಸಹಾಯಕಿ ಭಾರತಿ
ಮತ್ತು ಸ್ತ್ರೀ ಶಕ್ತಿ ಸಂಘದ ಸದಸ್ಯರು, ನವಶಕ್ತಿ ಒಡಿಯೂರು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.







