













ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು, ಅ.15 ರಂದು ನಿಧನರಾದ ಕಕ್ಕೆಬೆಟ್ಟು ರಾಘವ ನಾಯ್ಕ್ ಇವರ ಮರಣ ಸಾಂತ್ವನ ನಿಧಿ ರೂ.12000/- ವನ್ನು ಪತ್ನಿ ಪದ್ಮಾವತಿ ಮತ್ತು ಪುತ್ರ ಪ್ರದೀಪ್ ರವರಿಗೆ ಅ.15 ರಂದು ಸಂಘದ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ ರವರು ವಿತರಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಸುರೇಶ್ ಎಂ.ಎಚ್, ಹರೀಶ್ ಮಾಣಿಬೆಟ್ಟು, ಈಶ್ವರ ಆರ್ ಕಲ್ಚಾರು, ಪದ್ಮಯ್ಯ ನಾಯ್ಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ಮತ್ತಿತರರು ಉಪಸ್ಥಿತರಿದ್ದರು.







