













ದುಗ್ಗಲಡ್ಕದ ಮಾರುತಿ ಆರ್ಕೆಡ್‌ನಲ್ಲಿ ನೂತನವಾಗಿ ಆರಂಭಗೊಂಡಿರುವ ‘ಫೋಟೋ ಪಿಕ್ ಡಿಜಿಟಲ್ ಸ್ಟುಡಿಯೋ, ವೀಡಿಯೋ ಮತ್ತು ಜೆರಾಕ್ಸ್’ ಸಂಸ್ಥೆಯ ಶುಭಾರಂಭ ಇಂದು ನಡೆಯಿತು.
ನೂತನ ಮಳಿಗೆಯನ್ನು ಛಾಯಾಗ್ರಾಹಕರ ಸಂಘದ ಸ್ಥಾಪಕಾಧ್ಯಕ್ಷರಾದ ಸ್ಟುಡಿಯೋ ಗೋಪಾಲ್ ಅವರು
ಉದ್ಘಾಟಿಸಿ, ಸಂಸ್ಥೆಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಫೋಟೋಗ್ರಾಫರ್ಸ್ ಯೂನಿಯನ್ನ ಸುಳ್ಯ ವಲಯ ಅಧ್ಯಕ್ಷ ಶಶಿಗೌಡ, ಮಳಿಗೆಯ ಮಾಲೀಕರಾದ ಶುಭಕರ ಆರ್ನೂಜಿ ಹಾಗೂ ಅವರ ಕುಟುಂಬಸ್ಥರು, ಕಟ್ಟಡದ ಮಾಲೀಕರಾದ ಲೋಕೇಶ್ ಎ. ಸೇರಿದಂತೆ ಊರಿನ ಗಣ್ಯರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.







