ತಾಲೂಕಿನ ಜನರಿಗೆ ಇದು ವಿಶ್ವಾಸಾರ್ಹ, ಬಡ್ಡಿರಹಿತ ಹಾಗೂ ಅತೀ ಶೀಘ್ರವಾಗಿ ದೊರೆಯುವ ಸಾಲದ ಯೋಜನೆ: ಅಲ್ವಿನ್ ಜೋಯಲ್ ನೊರೊನ್ಹಾ
ಸುಳ್ಯದ ಶ್ರೀಹರಿ ಬಿಲ್ಡಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ.ಕೆ. ಗ್ರೂಪ್ ಆಫ್ ಕಂಪನೀಸ್ನ ಸಹಸಂಸ್ಥೆಯಾದ ಚಿಟ್ಸ್ ಫಂಡ್ (ಕುದಿ) ಅ. 15ರಂದು ಪ್ರಾರಂಭಗೊಂಡಿತು.














ನೂತನ ಸಂಸ್ಥೆಯನ್ನು ಡಿ.ಕೆ. ಬಿಸಿನೆಸ್ ಅಂಡ್ ಟೆಕ್ನಾಲಜಿ ಅಡ್ವೈಸರ್ಸ್ ಪ್ರೈ. ಲಿ. ಹಾಗೂ ದ.ಕ. ಮ್ಯೂಚುವಲ್ ಬೆನಿಫಿಟ್ಸ್ ನಿಧಿ ಲಿ. ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಅಲ್ವಿನ್ ಜೋಯಲ್ ನೊರೊನ್ಹಾ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಸ್ಥೆಯು ಸರ್ಕಾರದಿಂದ ಪರವಾನಗಿ ಪಡೆದು ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು, ಯಾವುದೇ ನಕಲಿ ವ್ಯವಹಾರ ನಡೆಸುವುದಿಲ್ಲ. ಈ ಸಂಸ್ಥೆಯ ಮೂಲಕ ಜನರಿಗೆ ಶೀಘ್ರವಾಗಿ ಹಾಗೂ ಸುಲಭವಾಗಿ ಬಡ್ಡಿರಹಿತ ಸಾಲ ಸಿಗಲಿದೆ. ಇದರೊಂದಿಗೆ ಬ್ಯಾಂಕ್ಗಳ ವಿವಿಧ ಸಾಲಗಳ ಕುರಿತು ಮಾಹಿತಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಬ್ಯಾಂಕ್ಗಳಲ್ಲಿ ಹಣ ಠೇವಣಿ ಮಾಡುವ ವ್ಯವಸ್ಥೆ ಸೇರಿದಂತೆ ಹಲವು ಯೋಜನೆಗಳನ್ನು ಪ್ರಾರಂಭಿಸಲಿದ್ದೇವೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಮೋ ಮಾರುತಿ ಚಿಟ್ಸ್ ಪ್ರೈವೇಟ್ ಲಿ., ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಎಸ್. ಸತೀಶ್ ನಾಯಕ್, ಸಂಸ್ಥೆಯ ನಿರ್ದೇಶಕ ಶಭರೀಶ್ ಸುವರ್ಣ, ಶ್ರೀಹರಿ ಕಾಂಪ್ಲೆಕ್ಸ್ನ ಮಾಲಕ ಕೃಷ್ಣ ಕಾಮತ್, ಸುಳ್ಯ ತೆರಿಗೆ ಪಾವತಿದಾರರ ಮತ್ತು ತೆರಿಗೆ ಉಳಿತಾಯಗಾರರ ಸಂಘದ ಅಧ್ಯಕ್ಷ ಹಾಗೂ ಪಾಲುದಾರ ವೆಂಕಟ್ರಮಣ ಮುಳ್ಯ, ಉಪಾಧ್ಯಕ್ಷ ಹಾಗೂ ಪಾಲುದಾರ ಶಿವಪ್ರಕಾಶ್ ಅಡ್ಡನಪಾರೆ ಉಪಸ್ಥಿತರಿದ್ದು, ಶುಭ ಹಾರೈಸಿದರು.

ಗುತ್ತಿಗಾರು ತೆರಿಗೆ ಪಾವತಿದಾರರ ಮತ್ತು ಉಳಿತಾಯದಾರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸೀತಾರಾಮ ಗೌಡ ಹೊಸೋಳಿಕೆ, ಕಡಬ ಶಾಖೆಯ ಉಪಾಧ್ಯಕ್ಷ ಕೃಷ್ಣಪ್ಪ ಮಡಿವಾಳ ಸೇರಿದಂತೆ ಸಂಸ್ಥೆಯ ಹಿತೈಷಿಗಳು ಉಪಸ್ಥಿತರಿದ್ದರು.



ಇದೇ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಲ್ವಿನ್ ಜೋಯಲ್ ನೊರೊನ್ಹಾ, ನಮೋ ಮಾರುತಿ ಚಿಟ್ಸ್ ಪ್ರೈವೇಟ್ ಲಿ., ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಎಸ್. ಸತೀಶ್ ನಾಯಕ್, ನಿರ್ದೇಶಕ ಶಭರೀಶ್ ಸುವರ್ಣ ಹಾಗೂ ಶ್ರೀಹರಿ ಕಾಂಪ್ಲೆಕ್ಸ್ನ ಮಾಲಕ ಕೃಷ್ಣ ಕಾಮತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಖೆಯ ಮ್ಯಾನೇಜರ್ ಅವಿನಾಶ್ ಎಲ್ಲರನ್ನು ಸ್ವಾಗತಿಸಿ, ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.








