













ದುಗ್ಗಲಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ನೂತನ ಆಡಳಿತ ಸಮಿತಿ ಅಧ್ಯಕ್ಷರಾಗಿ ಎಂ.ಕೆ.ನಾರಾಯಣ ಮಣಿಯಾಣಿ ದುಗ್ಗಲಡ್ಕ ಮತ್ತು ಕಾರ್ಯದರ್ಶಿಯಾಗಿ ಗಿರೀಶ್ ರೈ ಮೂಡೆಕಲ್ಲುರವರನ್ನು ಆಯ್ಕೆಮಾಡಲಾಗಿದೆ.

ಅ.11ರಂದು ದುಗ್ಗಲಡ್ಕ ಅಯ್ಯಪ್ಪ ಭಜನಾ ಮಂದಿರದಲ್ಲಿ
ಅಧ್ಯಕ್ಷರಾದ ದಯಾನಂದ ಸಾಲ್ಯಾನ್ ಮೂಡೆಕಲ್ಲುರವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎಂ. ಕೆ. ನಾರಾಯಣ ಮಣಿಯಾಣಿ,
ಉಪಾಧ್ಯಕ್ಷರಾಗಿ ಶೇಷಪ್ಪ ರೈ ದುಗ್ಗಲಡ್ಕ,ಕಾರ್ಯದರ್ಶಿಯಾಗಿ ಗಿರೀಶ್ ರೈ ಮೂಡೆಕಲ್ಲು,
ಜೊತೆಕಾರ್ಯದರ್ಶಿಯಾಗಿ ನಾರಾಯಣ ಮಣಿಯಾಣಿ ಮಣಂಗಳ,
ಸಂಚಾಲಕರಾಗಿ ರಾಧಾಕೃಷ್ಣ ಕಲ್ಮಡ್ಕ
ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.







