ಅಧ್ಯಕ್ಷ- ಗಣೇಶ್ ರಾಮಕುಂಜ, ಕಾರ್ಯದರ್ಶಿ- ಹರೀಶ್ ಕೆ,
ಖಜಾಂಜಿ- ರಮೇಶ್
ಕೊಡಿಯಾಲಬೈಲು ಬ್ರಹ್ಮರಗಯ ಶ್ರೀ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆಯು ಅ. 11 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.














ಮಹಾಸಭೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದು ಇತ್ತೀಚೆಗೆ ಅಗಲಿದ ಹಿರಿಯ ಗುರುಸ್ವಾಮಿಯವರಾದ ಮಾಧವ ಷೇಗೋ ರವರಿಗೆ ನುಡಿ ನಮನ ಸಲ್ಲಿಸಿ ಒಂದು ನಿಮಿಷದ
ಮೌನ ಪ್ರಾರ್ಥನೆ ನೆರವೇರಿಸಲಾಯಿತು.
ಸಮಿತಿಯ ಅಧ್ಯಕ್ಷರಾದ ಗಣೇಶ್ ರಾಮಕುಂಜ ರವರು ಅಧ್ಯಕ್ಷತೆ ವಹಿಸಿದ್ದರು.
ಗತ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿ ಹರೀಶ್ ಕೆ ಬೆಂಗಳೂರು ವಾಚಿಸಿದರು. ಕೋಶಾಧಿಕಾರಿ ರಮೇಶ್ ಬ್ರಹ್ಮರಗಯ ಲೆಕ್ಕ ಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ 2027-28 ಸಾಲಿನ ಆಡಳಿತ ಸಮಿತಿ ಅಧ್ಯಕ್ಷರಾಗಿ ಗಣೇಶ್ ರಾಮಕುಂಜ, ಉಪಾಧ್ಯಕ್ಷರುಗಳಾಗಿ ಕಾಳಿಯಪ್ಪ ಗುರುಸ್ವಾಮಿ ಮಿಲಿಟರಿ ಗ್ರೌಂಡ್, ಪ್ರಸಾದ್ ಎ.ಎಸ್ ಜಯನಗರ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕೆ ಬೆಂಗಳೂರು, ಕಾರ್ಯದರ್ಶಿ ಪ್ರವೀಣ್ ಕುಮಾರ್ ಎ.ಎಂ ಜಯನಗರ, ಕೋಶಾಧಿಕಾರಿ ರಮೇಶ್ ಬ್ರಹ್ಮರಗಯ, ರಾಕೇಶ್ ಕುಂಟಿಕಾನ ಇವರುಗಳನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಗೌರವ ಸಲಹೆಗಾರರಾಗಿ ಬಾಲಕೃಷ್ಣ ಭಟ್ ಕೊಡೆಂಕೇರಿ, ಡಾ.ಪ್ರಕಾಶ್ ರಾವ್, ಮಧುಸೂದನ್ ಕಾಸರಗೋಡು, ಸರೋಜಿನಿ ಪೆಲ್ತಡ್ಕ, ಶಿಲ್ಪಾ ಸುದೇವ್ ಜಯನಗರ, ಮಹಾಲಕ್ಷ್ಮಿ ಕೊರಂಬಡ್ಕ, ರಾಧಾಕೃಷ್ಣ ನಾಯಕ್ ಜಯನಗರ, ರಾಧಾಕೃಷ್ಣ ಮಾಣಿಬೆಟ್ಟು ರವರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಸದಸ್ಯರುಗಳಾಗಿ ರಾಧಾಕೃಷ್ಣ ವಾಗ್ಲೆ, ದಿನೇಶ್,ಎ. ಕೇಶವ ರಾವ್, ಶಿವನಾಥ್ ರಾವ್
ಕೊಡಿಯಾಲಬೈಲ್, ಕೇಶವ್ ಮಾಸ್ತರ್,ಅಜಿತ್ ಜಿ.ಕೆ ಹೊಸಗದ್ದೆ, ಸುರೇಂದ್ರ ಕಾಮತ್, ದೀಕ್ಷಿತ್ ಕುಮಾರ್, ಸುದೇವ, ಅಭಿಷೇಕ್, ಪ್ರಸನ್ನ ಎಂ.ಆರ್, ಪಕ್ಕಿರೇಶ್ ಜಯನಗರ, ಗಿರೀಶ್, ಗ್ರಿತೇಶ್, ಅವಿನ್
ಬೆಟ್ಟಂಪಾಡಿ, ದಾಮೋದರ ಪುತ್ತೂರು, ಗಣೇಶ್ ಕಾಸರಗೋಡು, ಅನುಷ್, ಅಜೇಶ್ ಬ್ರಹ್ಮರಗಯ , ಕಾರ್ ಮೇಘಮ್, ದೇವೇಂದ್ರ, ವೀಣಾ ನಂಬಿಯಾರ್, ಪುಷ್ಪ, ಬಾಲಾಜಿ ಮಿಲಿಟರಿ ಗ್ರೌಂಡ್,ರಾಜೇಶ್ ಅಮೈ, ರಾಜೇಶ್ ಜಟ್ಟಿಪಳ್ಳ ರವರನ್ನು ಆಯ್ಕೆ ಮಾಡಲಾಯಿತು.
ಬಳಿಕ ಅಯ್ಯಪ್ಪ ದೀಪೋತ್ಸವದ ಕಾರ್ಯಕ್ರಮದ ರೂಪು ರೇಷೆಗಳ ಕುರಿತು ವಿಚಾರ ವಿಮರ್ಶೆ ನಡೆಸಲಾಯಿತು.
ಕಾರ್ಯದರ್ಶಿ
ಹರೀಶ್ ಕೆ ಬೆಂಗಳೂರು ಸ್ವಾಗತಿಸಿದರು. ರಾಕೇಶ್ ಕುಂಟಿಕಾನ ವಂದಿಸಿದರು. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.







