ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಪ್ರಮೋದ್ ಕುಮಾರ್ ಪಿ.ಎಂ. ಗೆ ಡಾಕ್ಟರೇಟ್ ಪದವಿ

0

ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜ್ ಉಪನ್ಯಾಸಕ ಪ್ರಮೋದ್ ಪಿ.ಎಂ. ರವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು.) ಕ್ಕೆ ಸಲ್ಲಿಸಿದ “ARECA PLANT DISEASE IDENTIFICATION AND CLASSIFICATION USING DEEP LEARNING TECHNIQUES” ( ಅರೆಕಾ ಪ್ಲಾಂಟ್ ಡಿಸೀಸ್ ಐಡೆಂಟಿಫಿಕೇಶನ್ ಆಂಡ್ ಕ್ಲಾಸಿಫಿಕೇಶನ್ ಯೂಸಿಂಗ್ ಡೀಪ್ ಲರ್ನಿಂಗ್ ಟೆಕ್ನಿಕ್ಸ್ )
ಎಂಬ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಲಭಿಸಿದೆ.
ತಿಪಟೂರಿನ ಕಲ್ಪತರು ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆರ್ಟಿಫೀಶಿಯಲ್ ಇಂಟಲಿಜೆನ್ಸಿ ಆ್ಯಂಡ್ ಮೆಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ರವಿಪ್ರಕಾಶ್ ಎಂ.ಎಲ್. ಇವರ ಮಾರ್ಗದರ್ಶನದಲ್ಲಿ ಪ್ರಮೋದ್ ರವರು ಈ ಅಧ್ಯಯನ ಪ್ರಬಂಧ ಸಿದ್ಧಗೊಳಿಸಿದ್ದರು.
ಪುತ್ತೂರು ತಾಲೂಕು ಪಾಲ್ತಾಡಿ ನಿವಾಸಿಯಾಗಿರುವ ನಿವೃತ್ತ ಮುಖ್ಯೋಪಾಧ್ಯಾಯ ಮೋನಪ್ಪ ಗೌಡ ಪಿ. ಮತ್ತು ದೇವಕಿ ಪಿ. ದಂಪತಿಗಳ ಪುತ್ರನಾಗಿರುವ ಡಾ.ಪ್ರಮೋದ್ ಕುಮಾರ್ ಪಿ.ಎಂ.ರವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲ್ತಾಡಿ ಹಾಗೂ ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಶ್ರೀ ರಾಮಕುಂಜೇಶ್ವರ ಪಿ.ಯು. ಕಾಲೇಜು, ರಾಮಕುಂಜ ಇಲ್ಲಿ ಪೂರೈಸಿ, ನಂತರ ಮಂಗಳೂರಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಮುಗಿಸಿ, ಸ್ನಾತಕೋತ್ತರ ಪದವಿಯನ್ನು ಶಿವಮೊಗ್ಗದ ಜವಾಹರ್‌ಲಾಲ್ ನೆಹರು ನ್ಯಾಶನಲ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಪೂರೈಸಿದ್ದಾರೆ.
ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಕಾಲೇಜಿನಲ್ಲಿ 14 ವರ್ಷಗಳಿಂದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ಹವ್ಯಶ್ರೀ ಪುರ ಇವರು ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.