













ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಭಕ್ತಿಗೀತೆ ಸ್ಪರ್ಧೆಯಲ್ಲಿ ಯಶ್ವಿಕ ಕುಂಟಿನಿ ಇವರು ಸ್ಪರ್ಧಿಸಿ, ದ್ವಿತೀಯ ಸ್ಥಾನವನ್ನು ಪಡೆದು, ಪ್ರಮಾಣ ಪತ್ರ, ಟ್ರೋಫಿ ಹಾಗೂ ನಗದು ಬಹುಮಾನವನ್ನು ಪಡೆದಿರುತಾರೆ. ಇವರು ಸುಗಮ ಸಂಗೀತವನ್ನು ಡಾl ಕಿರಣಕುಮಾರ್ ಪುತ್ತೂರು ಇವರೊಂದಿಗೆ ಸುಳ್ಯದ ಗಾನಸಿರಿಯಲ್ಲಿ, ಕರ್ನಾಟಿಕ್ ಶಾಸ್ತ್ರೀಯ ಸಂಗೀತ ವನ್ನು ರೇಖಾ ಹೊನ್ನಡಿಯವರೊಂದಿಗೆ ಅಭ್ಯಾಸ ಮಾಡುತಿದ್ದಾರೆ. ಹಾಗೂ ಶ್ರೀಮತಿ ರಂಜಿನಿ ಮುಳ್ಯ ಇವರ ಮಕ್ಕಳ ಕಲಾತಂಡದಲ್ಲಿ ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುತ್ತಾರೆ.ಇವರು ವಿವೇಕಾನಂದ ವಿನೋಬನಗರ ವಿದ್ಯಾಸಂಸ್ಥೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದಾರೆ.ಇವರು ಗಿರೀಶ್ ಕುಂಟಿನಿ ಮತ್ತು ಶ್ರೀಮತಿ ಸ್ವಾತಿ ಗಿರೀಶ್ ರವರ ಸುಪುತ್ರಿ.







