ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಿ, ಸಂಭ್ರಮದ ನವರಾತ್ರಿ ಉತ್ಸವ

0

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅ.11 ರಿಂದ ನವರಾತ್ರಿ ಉತ್ಸವವು ಭಕ್ತಿ,ಸಂಭ್ರಮದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.
ಪ್ರತೀದಿನ ಬೆಳಿಗ್ಗೆ ಪೂಜೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ,ಹಾಗೂ ಸಂಜೆ ವಾಹನ ಪೂಜೆ ನಡೆಯುತ್ತಿದೆ.


ರಾತ್ರಿ ಗಂಟೆ 7.30 ಕ್ಕೆ ದುರ್ಗಾಪೂಜೆ,ಶ್ರೀ ದೇವರಿಗೆ ಮಹಾಮಂಗಳಾರತಿ ,ಪ್ರಸಾದ ವಿತರಣೆ ನಡೆಯುತ್ತಿದೆ.
ಅ. 20ರಂದು ಆಯುಧ ಪೂಜೆ,ಅ.21 ರಂದು ವಿಜಯದಶಮಿ ದಿನದಂದು
ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದುರ್ಗಾದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ ತಿಳಿಸಿದ್ದಾರೆ.