













ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೀದಿಗುಡ್ಡೆಯಲ್ಲಿ ಅ.17 ಉದ್ಘಾಟನೆಗೊಂಡಿತು.
ವ್ಯವಸ್ಥಾಪನ ಸಮಿತಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇದರ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಅವರು ಉದ್ಘಾಟಿಸಿ ಶುಭಹಾರೈಸಿದರು.
ಬಳ್ಪ ಗ್ರಾ.ಪಂ ನ ಆಡಳಿತಾಧಿಕಾರಿ ಶ್ರೀಕಾಂತ್ ಅವರು ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭದಲ್ಲಿ ಕೆ.ಎಸ್.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ ಆರ್ ರಂಗಯ್ಯ ಶೆಟ್ಟಿಗಾರ್, ಪ್ರಾಧ್ಯಾಪಕರಾದ ಡಾl ತಿಲಕ ಎ. ಎ ಬಳ್ಪ ಗ್ರಾ.ಪಂ ಪಿಡಿಒ ದಯಾನಂದ ಪಿ, , ಕೆ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾl.ದಿನೇಶ ಪಿ ಟಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೀದಿಗುಡ್ಡೆ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಕುಸುಮಾವತಿ, ಸಿದ್ಧಿ ವಿನಾಯಕ ಭಜನಾ ಮಂಡಳಿ, ಬೀದಿಗುಡ್ಡೆ ಅಧ್ಯಕ್ಷ ವಿಶ್ವನಾಥ ರೈ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯಂತ ಕುಮಾರ್, ಶಿಬಿರ ಉಸ್ತುವಾರಿ ಮಹೇಶ್ ಸುಂತಾರು, ಸಿದ್ಧಿವಿನಾಯಕ ಭಜನಾ ಮಂಡಳಿ ಬೀದಿಗುಡ್ಡೆ, ಅಧ್ಯಕ್ಷರಾದ ಗಣೇಶ ಕೊಠಾರಿ, ಶಿಬಿರಾಧಿಕಾರಿ ಶ್ರೀಮತಿ ಸುಮಿತ್ರ ಅರಂಪಾಡಿ,, ಎನ್ ಎಸ್ ಎಸ್ ಘಟಕದ ನಾಯಕರುಗಳಾದ ಅನುಷಾ, ಹರೀಶ್, ಕೀರ್ತನ್ ಉಪಸ್ಥಿತರಿದ್ದರು. ಶಿಬಿರದ ಅಧಿಕಾರಿ ಶ್ರೀಮತಿ ಶ್ರೀಲತಾ ಕಮಿಲ ಸ್ವಾಗತಿಸಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೀದಿಗುಡ್ಡೆಯ ಮುಖ್ಯ ಶಿಕ್ಷಕಿ ಶ್ರೀಮತಿ ವೇದಾವತಿ ವಂದಿಸಿದರು. ಸ್ವಯಂ ಸೇವಕಿ ವರ್ಷಿಣಿ ಕಾರ್ಯಕ್ರಮ ನಿರೂಪಿಸಿದರು.







