ಅ.24ರಂದು ಸುಳ್ಯ ನಗರದಲ್ಲಿ ಸುಳ್ಯ ದಸರಾ ಶೋಭಾಯಾತ್ರೆ ನಡೆಯಲಿರುವುದರಿಂದ ಸುಳ್ಯ ನಗರದ ರಸ್ತೆಯ ಎರಡೂ ಬದಿಯಲ್ಲಿ ವಾಹನ ಪಾರ್ಕಿಂಗ್ ಅವಕಾಶ ಇಲ್ಲ ಎಂದು ನಗರ ಪಂಚಾಯತ್ ಸೂಚನೆ ನೀಡಿದೆ.














ಈ ಕುರಿತು ಆದೇಶ ಹೊರಡಿಸಿರುವ ನಗರ ಪಂಚಾಯತ್
NH – 275 ಹೆದ್ದಾರಿಯಲ್ಲಿ ಜ್ಯೋತಿಸರ್ಕಲ್ ನಿಂದ ಗಾಂಧಿನಗರ ತನಕ ಈಗಾಗಲೇ ಪ್ರತಿ ದಿನ ವಾಹನ ಪಾರ್ಕಿಂಗ್ ಗೆ ಅನುಕೂಲವಾಗುವಂತೆ ಸಮ ಮತ್ತು ಬೆಸ ಸಂಖ್ಯೆಯ ದಿನಾಂಕಗಳಂದು ನಿರ್ದಿಷ್ಟಪಡಿಸಿದ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದ್ದು, “ ದಸರಾ ಉತ್ಸವ 2026 ರ ಪ್ರಯುಕ್ತ ದಿನಾಂಕ : 24-10-2026 ರಂದು ಈ ನಿರ್ದಿಷ್ಟಪಡಿಸಿದ ಸ್ಥಳಗಳಲ್ಲಿ ಯಾವುದೇ ವಾಹನ ಪಾರ್ಕಿಂಗ್ ನ್ನು ನಿಷೇಧಿಸಲಾಗಿದೆ ಸಾರ್ವಜನಿಕರು ಸಹಕರಿಸುವಂತೆ ಅವರು ತಿಳಿಸಿದ್ದಾರೆ.







