













ಕೊಡಿಯಾಲಬೈಲು:-ಇಲ್ಲಿನ ಎಂ.ಜಿ.ಎಂ. ಶಾಲೆಯಲ್ಲಿ ಅಕ್ಟೋಬರ್ 19ರಂದು ಆಯುಧ ಪೂಜೆಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.

ಶಾಲಾ ವಿದ್ಯಾರ್ಥಿಗಳಾದ ಸವಿತೃ ಶರ್ಮಾ
ಸುದಾಂಶ್ ಶರ್ಮಾ ಇವರು ಆಯುಧ ಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀ ದೊಡ್ಡಣ್ಣ ಬರೆಮೇಲು, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಹಾಗೂ ಶಾಲಾ ಬಸ್ ಚಾಲಕರು ಉಪಸ್ಥಿತರಿದ್ದರು.
ಶಾಲೆಯ ವಾಹನಗಳು ಹಾಗೂ ವಿವಿಧ ಉಪಕರಣಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆಯನ್ನು ಸಡಗರದಿಂದ ಆಚರಿಸಲಾಯಿತು.







