ರೆಂಜಾಳ ಕ್ಷೇತ್ರದ ನೃತ್ಯಬಲಿ ಅಂಗಣಕ್ಕೆ ಇಂಟರ್ ಲಾಕ್ ಅಳವಡಿಸಲು ಉಮಾ ಮತ್ತು ಕುಟುಂಬ ಮಾಪಲಕಜೆ ಯವರಿಂದ 1,09,067 ರೂ. ಗಳ ಹಸ್ತಾಂತರ

0

*ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾನೆಗಳಲ್ಲಿ ಒಂದಾದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ಕ್ಷೇತ್ರದಲ್ಲಿ 2028ರಲ್ಲಿ ಅಷ್ಟಬಂಧ ಪುನರ್ ಪ್ರತಿಷ್ಠಾ ಕಾರ್ಯಕ್ರಮಗಳು ನಡೆಯಲಿದ್ದು, ಆ ಪ್ರಯುಕ್ತ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ನೃತ್ಯಬಲಿ ಅಂಗಣಕ್ಕೆ ಇಂಟರ್ ಲಾಕ್ ಅಳವಡಿಸುವ ಉದ್ದೇಶದಿಂದ ನೆಲ್ಲೂರು ಕೆಮ್ರಾಜೆ ಗ್ರಾಮದ ಮಾಪಲಕಜೆ ಉಮಾ ಮತ್ತು ಕುಟುಂಬದವರಿಂದ 1,09,067 ರೂ. ಗಳನ್ನು ದೇಣಿಗೆ ನೀಡಿದರು.

ಇಂದು ನಡೆದ ಹೊಸ ಅಕ್ಕಿ ಬಲಿವಾಡು ಕೂಟ ಮತ್ತು ಆಯುಧ ಪೂಜಾ ಕಾರ್ಯಕ್ರಮದಲ್ಲಿ ಮಾಪಳಕಜೆಯ ಉಮಾ ಮತ್ತು ಕುಟುಂಬದವರಿದ್ದು, ದೇಣಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಗನ್ನಾಥ ಕಾಯರ, ಕ್ಷೇತ್ರದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕ್ಕಾನ, ದೇವಾಲಯದ ವಿವಿಧ ಸಮಿತಿಗಳ ಪ್ರಮುಖರಾದ ಸತೀಶ್ ರಾವ್ ದಾಸರಾಬೈಲು, ಪುಟ್ಟಣ್ಣ ಗೌಡ ಬಾಣುರು, ದಾಮೋದರ ಪಾಟಾಳಿ ಮಿತ್ತಡ್ಕ, ಜಗನ್ಮೋಹನ ರೈ ರೆಂಜಾಳ, ಕುಮಾರಸ್ವಾಮಿ ರೆಂಜಾಳ ಮತ್ತಿತರರಿದ್ದರು.