ನಾಳೆ(ಅ. 21):ಪಂಜ ಪರಿಸರದ ನಾಡಹಬ್ಬ 17ನೇ ವರ್ಷದ ಶ್ರೀ ಶಾರದೋತ್ಸವ

0

ಶಾರದಾಂಬಾ ಭಜನಾ ಮಂಡಳಿ (ರಿ.) ಪಂಜ, ಶ್ರೀ ಶಾರದೋತ್ಸವ ಸಮಿತಿ-2026 ಇದರ ಆಶ್ರಯದಲ್ಲಿ ಪಂಜ ಪರಿಸರದ ನಾಡಹಬ್ಬ17ನೇ ವರ್ಷದ ಶ್ರೀ ಶಾರದೋತ್ಸವವು ಅ. 21 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಪೂ.ಗಂ. 8.30ಕ್ಕೆ ಪ್ರತಿಷ್ಠೆ,
ಧಾರ್ಮಿಕ ಸಂಸ್ಕಾರ ಶಿಕ್ಷಣ ಪಂಜದ ಮಕ್ಕಳಿಂದ
ಧಾರ್ಮಿಕ ಪಠಣ (ಸಂಸ್ಕಾರ ದೀಪಿಕಾ) , ಭಜನೆ, ಮಕ್ಕಳಿಗೆ ಅಕ್ಷರ ಅಭ್ಯಾಸ, ಪೂ.ಗಂ. 11.30ರಿಂದ ಧಾರ್ಮಿಕ ಸಭೆ, ಪೂ.ಗಂಟೆ 12.45ರಿಂದ ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆ
ಪೂ. ಗಂಟೆ 9 ರಿಂದ ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ಸಾಂಸ್ಕೃತಿಕ ಸ್ಪರ್ಧೆಯನ್ನು ವಲಯಾರಣ್ಯಾಧಿಕಾರಿ
ಶ್ರೀಮತಿ ಸಂಧ್ಯಾ ,ಕ್ರೀಡಾ ಸ್ಪರ್ಧೆಯನ್ನು ಬೆಂಗಳೂರಿನ ಉದ್ಯಮಿ
ದಿವಾಕರ ಬರ್ಲಾಯಬೆಟ್ಟು ಉದ್ಘಾಟಿಸಲಿದ್ದಾರೆ. ರಂಗೋಲಿ- ಕಿರಿಯ ಹಿರಿಯ,ಪ್ರೌಢ, ಸಾರ್ವಜನಿಕ ವಿಭಾಗ.ಚಿತ್ರಕಲಾ ಸ್ಪರ್ಧೆ ಯಲ್.ಕೆ.ಜಿ., ಯು.ಕೆ.ಜಿ. ಮತ್ತು 1ನೇ ತರಗತಿ ಮಕ್ಕಳಿಗೆ -ಐಚ್ಚಿಕ, 2ರಿಂದ 4ನೇ ತರಗತಿ ಮಕ್ಕಳಿಗೆ -ಸ್ವಚ್ಛ ಪರಿಸರ, 5ರಿಂದ 7ನೇ ತರಗತಿ ಮಕ್ಕಳಿಗೆ -ಶಾರದೆ, 8ರಿಂದ 10ನೇ ತರಗತಿ ಮಕ್ಕಳಿಗೆ- ಗ್ರಾಮೀಣ ಜೀವನ ವಿಷಯದಲ್ಲಿ ನಡೆಯಲಿದೆ. ಪೂ.ಗಂ. 10.30ರಿಂದ ಭಕ್ತಿಗೀತೆ, ರಸಪ್ರಶ್ನೆ – ಕಿರಿಯ (1-4 ತರಗತಿ), ಹಿರಿಯ (5-8 ತರಗತಿ),ಪ್ರೌಢ (9-10 ತರಗತಿ),ಸಾರ್ವಜನಿಕರಿಗೆ.
ಯಲ್.ಕೆ.ಜಿ., ಯು.ಕೆ.ಜಿ., ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ. ಮಹಿಳೆಯರಿಗೆ ಸಂಗೀತ ಕುರ್ಚಿ, ಮೋಜಿನ ಆಟಗಳು.
ಮಹಿಳೆಯರಿಗೆ ಗೋಣಿಚೀಲ ಓಟ ಮತ್ತು ಲಿಂಬೆ ಚಮಚ ಓಟ.

ಪೂ.ಗಂ. 10 ರಿಂದ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ
19 ವರ್ಷದ ಒಳಗಿನ ವಿದ್ಯಾರ್ಥಿಗಳ ಬಾಲಕರ ಕಬಡ್ಡಿ ಪಂದ್ಯಾಟ. ಪ್ರ. ರೂ. 5,000 ನಗದು ಮತ್ತು ಶಾರದಾಂಬಾ
ಟ್ರೋಫಿ, ದ್ವಿ. ರೂ. 3,000 ನಗದು ಮತ್ತು ಶಾರದಾಂಬಾ
ಟ್ರೋಫಿ. ಸೆಮಿಫೈನಲ್‌ನಲ್ಲಿ ನಿರ್ಗಮಿತ ತಂಡಗಳಿಗೆ 1,000 ಬಹುಮಾನ ಇರುತ್ತದೆ. ಪ್ರತಿ ತಂಡದಲ್ಲಿ ಒಂದೇ ಸಂಸ್ಥೆಯ ವಿದ್ಯಾರ್ಥಿಗಳು ಆಗಿರಬೇಕು. ಸಂಸ್ಥೆಯ ಪ್ರಾಚಾರ್ಯರು ನೀಡಿದ ಅರ್ಹತ ಪತ್ರ, ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರ ಬೇಕು.

ಸಾಂಸ್ಕೃತಿಕ ಸಂಭ್ರಮ :
ಅ.ಗಂ.1 ರಿಂದ ವಿಶ್ವ ಕಲಾನಿಕೇತನ ಕಲ್ಬರಲ್ ಆರ್ಟ್ಸ್ ಪುತ್ತೂರು ಇದರ ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಭರತನಾಟ್ಯ (ನಿರ್ದೇಶನ: ಕರ್ನಾಟಕ ಕಲಾಶ್ರೀ, ವಿದುಷಿ ನಯನ ವಿ. ರೈ, ವಿದುಷಿ ಸ್ವಸ್ತಿಕಾ ಆರ್. ಶೆಟ್ಟಿ).ಮ. ಗಂ2 ರಿಂದ ರಂಜನಿ ಸಂಗೀತ ಸಭಾ ಎಲಿಮಲೆ (ರಿ.) ಇದರ ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಸಂಗೀತ ಗುರುಗಳಾದ ಶ್ರೀಮತಿ ರೇಖಾ ಹೊನ್ನಾಡಿ ಇವರ ನಿರ್ದೇಶನದಲ್ಲಿ ಸ್ವರ ರಾಗ ಸುಧಾ ಕಾರ್ಯಕ್ರಮ. ಅ.ಗಂ 3.ಕಲಾ ಮಂದಿರ್ ಡ್ಯಾನ್ಸ್‌ ಕ್ರಿವ್ ಇದರ ಬೆಳ್ಳಾರೆ ಮತ್ತು ಪಂಜ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಸಂಭ್ರಮ (ಸಂಯೋಜನೆ: ಪ್ರಮೋದ್ ರೈ ಬೆಳ್ಳಾರೆ. ನಿರ್ದೇಶನ: ಅಶೋಕ್ ಬೆಳ್ಳಾರೆ) ನಡೆಯಲಿದೆ.

ಧಾರ್ಮಿಕ ಸಭೆ: ಪೂ. ಗಂ 11.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ
ನಡೆಯಲಿದೆ.ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಧರ್ಮಪಾಲ ಮರಕ್ಕಡ ಸಭಾಧ್ಯಕ್ಷತೆ ವಹಿಸಲಿದ್ದಾರೆ.ಚೊಕ್ಕಾಡಿ
ಸತ್ಯಸಾಯಿ ವಿದ್ಯಾ ಸಂಸ್ಥೆಯ ಆಧ್ಯಾತ್ಮಿಕ ಸಂಯೋಜಕರಾದ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಎಸ್. ಇಂಜಾಡಿ ಪಾಲ್ಗೊಳ್ಳಲಿದ್ದಾರೆ.
ಶ್ರೀ ಶಾರದಾಂಬಾ ಭಜನಾ ಮಂಡಳಿ(ರಿ) ಪಂಜ ಇದರ ವತಿಯಿಂದ ಪಂಜ ಕ್ಲಸ್ಟರಿನ ಒಂಬತ್ತು ಶಾಲೆಗಳ ಆಯ್ದ ಒಂಬತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಸುಬ್ರಹ್ಮಣ್ಯ ಉದ್ಯಮಿ ವೇಣುಗೋಪಾಲ್ ಎನ್.ಎಸ್.
ಪುರಸ್ಕರಿಸಲಿದ್ದಾರೆ.
ಶೋಭಾಯಾತ್ರೆ-ಜಲಸ್ತಂಭನ
ಸಂಜೆ 4.30ರಿಂದ ಶಾರದಾಮಾತೆಯ ವೈಭವದ ಶೋಭಾಯಾತ್ರೆ-ಜಲಸ್ತಂಭನ ನಡೆಯಲಿದೆ.ಕುಣಿತ ಭಜನೆ, ಹುಲಿವೇಷ, ನಾಸಿಕ್ ಬ್ಯಾಂಡ್ ಪ್ರದರ್ಶನ
ವಿಶೇಷ ಆಕರ್ಷಣೆಯಾಗಲಿದೆ