ಮರ್ಕಂಜದ ದೇಶಕೋಡಿ ಶ್ರೀ ಅನ್ನಪೂರ್ಣೇಶ್ವರಿ ದೇವಿ ಯೋಗೀಶ್ವರ ಸಿದ್ಧಮಠದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ರಾಜೇಶ್ ನಾಥ್ ಜೀ. ಯವರ ನೇತೃತ್ವದಲ್ಲಿ ನವರಾತ್ರಿ ಉತ್ಸವವು ಅ.11ರಿಂದ ಅ.20ರದವರೆಗೆ ಶ್ರದ್ಧಾ-ಭಕ್ತಿ, ಸಂಭ್ರಮ ಮತ್ತು ವೈಭವದಿಂದ ನಡೆಯಿತು.















ನವರಾತ್ರಿ ದಿನಗಳಲ್ಲಿ ಭಜನೆ, ಪೂಜೆ ಹಾಗೂ ವಿವಿಧ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಅ.11ರಂದು ಬೆಳಿಗ್ಗೆ ಶ್ರೀ ದೇವಿಯ ಗದ್ದುಗೆ ಏರುವ ಕಾರ್ಯಕ್ರಮ, ಬಳಿಕ ಪ್ರತಿದಿನ ಪ್ರತಿದಿನ ಬೆಳಿಗ್ಗೆ ಶ್ರೀ ದೇವಿಯ ಮಹಾಪೂಜೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಭಜನಾ ಕಾರ್ಯಕ್ರಮ, ವಿವಿಧ ವಿಶೇಷ ಮಹಾಪೂಜೆಗಳು ನಡೆದು, ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ನಡೆಯಿತು.
ಅ.19ರಂದುಬೆಳಿಗ್ಗೆ ಶ್ರೀ ದೇವಿಯ ಮಹಾಪೂಜೆ ಬಳಿಕ ಕಾಲಭೈರವ ದೇವರ ಗದ್ದುಗೆ ಏರುವುದು, ಮಧ್ಯಾಹ್ನ ಮಹಾಪೂಜೆ, ಭಜನಾ ಕಾರ್ಯಕ್ರಮ, ರಾತ್ರಿ ವಿಶೇಷ ಮಹಾಪೂಜೆ, ಸಿದ್ಧಪುರುಷ ದೇವರ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಅ.20ರಂದು ಬೆಳಿಗ್ಗೆ ನವಧ್ಯಾನ ಪ್ರಸಾದ ವಿತರಣೆ, ಜಳಕ ಕಾರ್ಯಕ್ರಮ, ಸಾಯಂಕಾಲ ವಾಹನ ಪೂಜೆ,, ರಾತ್ರಿ ಕೊರಗಜ್ಜ ದೈವದ ಅಗಿಲು ಸೇವೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ರಾಜೇಶ್ ನಾಥ್ ಜೀ., ಹಾಗೂ ಕುಟುಂಬದವರು, ಪಂಚಾಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ಕಾಯರ, ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿದಂತೆ ಹಾಗೂ ಊರ ಭಕ್ತರು ಉಪಸ್ಥಿತರಿದ್ದರು.







