ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ನವರಾತ್ರಿ ಮತ್ತು ಆಯುಧ ಪೂಜಾ ಕಾರ್ಯಕ್ರಮ

0

ದೇವಚಳ್ಳ ಗ್ರಾಮದ ಕಾರಣಿಕ ಕ್ಷೇತ್ರ ಮಾವಿನಕಟ್ಟೆ
ಉದಯಗಿರಿ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಆಯುಧ ಪೂಜಾ ಕಾರ್ಯಕ್ರಮವು ಇಂದು(ಸೆ. 20) ನಡೆಯಿತು.

ಸಾರ್ವಜನಿಕ ಆಯುಧ ಪೂಜಾ ಸೇವಾ ಸಮಿತಿ ಆಶ್ರಯದಲ್ಲಿ ನವರಾತ್ರಿ ಪೂಜೆ ಮತ್ತು ಆಯುಧ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ ಶ್ರೀ ಗಣಪತಿ ಹೋಮ, ನಂತರ ಭಜನಾ ಕಾರ್ಯಕ್ರಮ, ಬಳಿಕ ಶ್ರೀ ದೇವಿಯ ಪೂಜೆ ನಡೆಯಿತು. ಬಳಿಕ ಆಯುಧ ಪೂಜೆ, ವಾಹನ ಪೂಜೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ಪ್ರಧಾನ ಕಾರ್ಯದರ್ಶಿ ಕೆ. ಆರ್. ರಾಧಾಕೃಷ್ಣ ‘ಶ್ರೀ ಕಟೀಲ್’ ಮಾವಿನಕಟ್ಟೆ, ಕೋಶಾಧಿಕಾರಿ ಗೋಪಿನಾಥ ಮೆತ್ತಡ್ಕ ಹಾಗೂ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.