














ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಅ.11ರಂದು ಆರಂಭ ಗೊಂಡಿದ್ದು ಅ. 20 ರಂದು ಸಂಪನ್ನ ಗೊಂಡಿತು.ಪ್ರತಿದಿನ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ. ಕಲಾಸೇವೆ, ಭಕ್ತಾರಿಂದ ದುರ್ಗಾ ಪೂಜೆ, ನವರಾತ್ರಿ ಪೂಜೆ, ಕುಂಕುಮಾರ್ಚನೆ, ನವರಾತ್ರಿ ಪೂಜೆ ಮತ್ತು ಅನ್ನದಾನ ಸೇವೆ, ವಾಹನ ಪೂಜೆ ಮೊದಲಾದ ಸೇವೆಗಳು ನಡೆಯಿತು. ನವರಾತ್ರಿ ಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಅ.20. ನಾಗತೀರ್ಥ ಪಂಚಲಿಂಗೇಶ್ವರ
ಮಕ್ಕಳ ಮಕ್ಕಳ ಭಜನಾ ತಂಡ, ಕಲ್ಮಡ್ಕ ಯುವ ಸ್ಫೂರ್ತಿ ಸೇವಾ ಸಂಘ(ರಿ.) ಇವರ ವತಿಯಿಂದ ಭಜನಾ ಸಂಕೀರ್ತನೆ. ಕು.ದೇವಿಕ ಕುರಿಯಾಜೆ ಇವರಿಂದ ‘ಭರತನಾಟ್ಯ’ ನಡೆಯಿತು.ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಾಯಿಲಪ್ಪ ಗೌಡ ಎಣ್ಮೂರು, ಸಂತೋಷ್ ಕುಮಾರ್ ರೈ ಬಳ್ಪ, ಧರ್ಮಣ್ಣ ನಾಯ್ಕ ಗರಡಿ, ಸತ್ಯನಾರಾಯಣ ಭಟ್ ಕಾಯಂಬಾಡಿ, ಶ್ರೀಮತಿ ಮಾಲಿನಿ ಕುದ್ವ , ಗೌರವ ಸಲಹೆಗಾರರು, ಅರ್ಚಕರು, ಸಿಬ್ಬಂದಿಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು.











