ಕುಕ್ಕೆ ರಥಬೀದಿಯಲ್ಲಿ ವಿಗ್ರಹ ಪ್ರತಿಷ್ಠಾಪನೆ

0

ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಸುಬ್ರಹ್ಮಣ್ಯ ಆಶ್ರಯದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ನೌಕರರ ವೃಂದ, ಕೆ.ಎಸ್.ಎಸ್ ಕಾಲೇಜು, ಎಸ್ ಎಸ್‌ಪಿಯು ಕಾಲೇಜಿನ ಸಹಯೋಗದಲ್ಲಿ ಶ್ರೀ ದೇವಳದ ರಥಬೀದಿ ಸಭಾಂಗಣದಲ್ಲಿ ಶನಿವಾರ ಶಾರದೋತ್ಸವ ಆರಂಭವಾಯಿತು.

ಸಮಿತಿ ಅಧ್ಯಕ್ಷೆ ಲೀಲಾ ಮನಮೋಹನ್, ಗೌರವಾಧ್ಯಕ್ಷ ಹರೀಶ್ ಎಸ್.ಇಂಜಾಡಿ, ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್‌ ಕೆ ‌ ನೆಕ್ರಾಜೆ, ಸೌಮ್ಯ ಭರತ್, ಅನುಷ್ಠಾನ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಭಟ್, ಕಾರ್ಯಾಧ್ಯಕ್ಷ ಡಾ.ದಿನೇಶ್‌ ಪಿ.ಟಿ., ಪ್ರಧಾನ ಕಾರ್ಯದರ್ಶಿ ಗೋಪಾಲ್, ಪ್ರಮುಖರಾದ ರವೀಂದ್ರ ಕೆ., ಪವನ್ ಎಂ.ಡಿ., ಸತೀಶ್‌ ಕೂಜುಗೋಡು, ರತ್ನಾಕರ ಶೆಟ್ಟಿ, ಉದಯಕುಮಾರ್, ಸುಬ್ರಹ್ಮಣ್ಯ, ಭವಿಷ್, ಎ.ಸುಬ್ರಹ್ಮಣ್ಯ ರಾವ್, ಪ್ರಸಾದ್, ಉದಯ ಕುಮಾ‌ರ್ ಕೆ.ಸಿ. ಇದ್ದರು.

ಈ ನಿಮಿತ್ತ ಗಣಪತಿ ಹೋಮ, ವಿಗ್ರಹ ಪ್ರತಿಷ್ಠಾಪನೆ, ವಿದ್ಯಾರ್ಥಿಗಳಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭಾನುವಾರ ಭಜನೆ, ಭಕ್ತಿ ಗಾಯನ ನಡೆಯಿತು.

ಅಕ್ಷರ ಗಾನ ಸುಧಾ ತಂಡ ಸುಬ್ರಹ್ಮಣ್ಯ
ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ನೌಕರರ ವೃಂದ
ಸುಖಪ್ರದ ಭಜನಾ ತಂಡ
ಸರ್ವ ಮಂಗಳ ಹಾಗೂ ತಂಡ
ಇವರುಗಳು ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಸಂಜೆ ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ ಇಂಜಾಡಿ, ಸದಸ್ಯರಾದ ಅಜಿತ್ ಪಾಲೇರಿ, ಕೆಡಿಪಿ ಸದಸ್ಯರಾದ ಶಿವರಾಮ್ ರೈ, ಕುಕ್ಕೆಯ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಸಮಾಜ ಸೇವಕ ರವಿಕಕ್ಕೆ ಪದವು, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ್ ಎಣ್ಣೆಮಜಲ್, ಖಜಾಂಜಿಗಳಾದ ಸುಬ್ರಮಣ್ಯ ಅತ್ಯಾಡಿ ಉಪಸ್ಥಿತರಿದ್ದರು. ಸಭಾಧ್ಯಕ್ಷತೆಯನ್ನು ಶ್ರೀ ಶಾರಾದೋತ್ಸವ ಸಮಿತಿ ಸುಬ್ರಮಣ್ಯದ ಅಧ್ಯಕ್ಷರಾದ ಶ್ರೀಮತಿ ಲೀಲಾಮನಮೋಹನ್ ವಹಿದ್ದರು. ಗೋಪಾಲ್ ಎಣ್ಣೆಮಜಲ್ ಸ್ವಾಗತಿಸಿ, ಸುಬ್ರಮಣ್ಯ ಅತ್ಯಾಡಿ ವಂದಿಸಿದರು ಕಾರ್ಯಕಾರಿ ಸಮಿತಿಯ ಎಂಜಿನಿಯರ್ ರಾಂಪ್ರಸಾದ್, ಮೋಹನ್ ದಾಸ್ ರೈ, ಸುಬ್ರಮಣ್ಯ ರಾವ್ ನೂಚಿಲ, ಉದಯ್ ನೂಚಿಲ, ಶೋಭಿತ್,ದೀಪಕ್ ನಂಬಿಯಾರ್, ಚರಣ್, ರವೀಂದ್ರ, ದೇವಳದ ಸಿಬ್ಬಂದಿಗಳು ಮತ್ತಿನ್ನಿತರರು ಉಪಸ್ಥಿತರಿದ್ದರು. ನಂತರ ಶೋಭಯಾತ್ರೆ ನಡೆದು ರುದ್ರಪಾದ ನದಿಯಲ್ಲಿ ಜಲಸ್ತಂಭನ ಮಾಡಲಾಯಿತು