ಬೆಳ್ಳಾರೆ ಶಾರದೋತ್ಸವ ಸಮಿತಿ ವತಿಯಿಂದ ಶ್ರೀ ಶಾರದೋತ್ಸವ

0

ಸಾರ್ವಜನಿಕರಿಗೆ ಸಮೂಹ ಡ್ಯಾನ್ಸ್ ಸ್ಪರ್ಧೆ ಮತ್ತು ಕಿನ್ನಿಪಿಲಿ ಸ್ಪರ್ಧೆ

ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ವತಿಯಿಂದ ಶ್ರೀ ಶಾರದೋತ್ಸವವು ಅ.21 ರಂದು ಪ್ರಾರಂಭಗೊಂಡಿದ್ದು ಅ. 22 ರಬರೆಗೆ ಶ್ರೀ ಶಾರದೋತ್ಸವವು ಬೆಳ್ಳಾರೆ ಅಚಲಾಪುರ ಕಟ್ಟೆಯ ಬಳಿ ನಡೆಯಲಿದೆ.
ಇಂದು ಬೆಳಿಗ್ಗೆ ಶಾರದಾ ಪ್ರತಿಷ್ಠೆ ,ಪೂಜೆ ನಡೆಯಿತು.


ಬಳಿಕ ವಿದ್ಯಾರಂಭ(ಅಕ್ಷರಾಭ್ಯಾಸ) ಶಾರದಾ ಸಹಸ್ರನಾಮಾರ್ಚನೆ ,ಅಷ್ಟೋತ್ತರನಾಮಾರ್ಚನೆ,ಆಯುಧ ಪೂಜೆ,ಇತ್ಯಾದಿ ಸೇವೆಗಳು ನಡೆಯಿತು.
ಬೆಳಿಗ್ಗೆ ಗಂಟೆ 10.00 ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದೆ.
ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ಬಳಿಕ ಅನ್ನಸಂತರ್ಪಣೆ ನಡೆಯಿತು.
ಅ.22 ರಂದು ಬೆಳಿಗ್ಗೆ ಗಂಟೆ 9.00 ರಿಂದ 10.30 ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.


ಸಂಜೆ ಗಂಟೆ 3.30 ರಿಂದ ಮಹಾಪೂಜೆ,ಪ್ರಸಾದ ವಿತರಣೆ,ಶೋಭಾಯಾತ್ರೆ ನಡೆಯಲಿದೆ.ಶ್ರೀ ದುರ್ಗಾ ನಾಸಿಕ್ ಬೀಟ್ಸ್ ಬೆಳ್ಳಾರೆ ಇವರಿಂದ “ನಾಸಿಕ್ ಬ್ಯಾಂಡ್” ನೊಂದಿಗೆ ,ಯಶ್ವಿ ಗೊಂಬೆ ಬಳಗ ಕಲ್ಮಡ್ಕ ,ಗೋಪಾಲಕೃಷ್ಣ ಗೊಂಬೆ ಬಳಗ ಎಡಮಂಗಲ ಇವರಿಂದ “ವಿವಿಧ ಆಕರ್ಷಣೀಯ ಗೊಂಬೆಗಳೊಂದಿಗೆ” “ಶರವಣಭವ ಸಿಂಗಾರಿ ಮೇಳ” ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕೋಟೆಮುಂಡುಗಾರು ಇವರಿಂದ ವಯಲಿನ್ ಮತ್ತು ಚೆಂಡೆ ವಾದನದೊಂದಿಗೆ , ವಿವಿಧ ಆಕರ್ಷಣೀಯ ಕುಣಿತ ಭಜನೆಯೊಂದಿಗೆ ವೈಭವದ ಶೋಭಾಯಾತ್ರೆ ನಡೆಯಲಿದೆ.
ಸಾರ್ಜನಿಕರಿಗೆ ಸ್ಪರ್ಧೆಗಳು
ಅ.21 ರಂದು ಬುಧವಾರ ಸಂಜೆ ಗಂಟೆ 6.00 ರಿಂದ ಸಮೂಹ ಡ್ಯಾನ್ಸ್ ಸ್ಪರ್ಧೆ ನಡೆಯಲಿದೆ.
ಪ್ರಥಮ ಬಹುಮಾನ ರೂ.15,000 ಮತ್ತು ಶಾರದಾ ಟ್ರೋಫಿ, ದ್ವಿತೀಯ ರೂ.10,000 ಮತ್ತು ಶಾರದಾ ಟ್ರೋಫಿ,ತೃತೀಯ ರೂ.6,000 ಮತ್ತು ಶಾರದಾ ಟ್ರೋಫಿ .
ಅ.22 ರಂದು ಫ್ರೆಂಡ್ಸ್ ಡೈಗರ್ಸ್ ಬೆಳ್ಳಾರೆ 10 ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಬೆಳ್ಳಾರೆಯಲ್ಲಿ ಪ್ರಥಮ ಬಾರಿಗೆ ಬೃಹತ್ ಕಿನ್ನಿಪಿಲಿ ಸ್ಪರ್ಧೆ (ಮಕ್ಕಳ ಹುಲಿ ನೃತ್ಯ) ಶಾರದಾಂಬ ವೇದಿಕೆಯಲ್ಲಿ ನಡೆಯಲಿದೆ.
ವಿಭಾಗ 1-0 ರಿಂದ 5 ವರ್ಷದ ಮಕ್ಕಳಿಗೆ ಪ್ರಥಮ 3,011,ದ್ವಿತೀಯ 2,011,ತೃತೀಯ 1,011 ವಿಭಾಗ 2-6 ರಿಂದ 10 ವರ್ಷದ ಮಕ್ಕಳಿಗೆ ಪ್ರಥಮ ರೂ.3,011 ದ್ವಿತೀಯ ರೂ.2,011, ತೃತೀಯ ರೂ.1,011 ಬಹುಮಾನ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಡ್ಯಾನ್ಸ್ ಸ್ಪರ್ಧೆಗೆ 15 /10/26 ಮೊದಲು ನೋಂದಾವಣೆ ಮಾಡಿದ 12 ತಂಡಗಳಿಗೆ ಮಾತ್ರ ಅವಕಾಶ.
ಹೆಚ್ಚಿನ ಮಾಹಿತಿಗಾಗಿ 9632048223