ಏನೆಕಲ್ಲು: ಉಚಿತ ಹೊಲಿಗೆ ತರಬೇತಿ ಶಿಬಿರ ಸಮಾರೋಪ

0

: ಏನೆಕಲ್ಲು ರೈತ ಯುವಕಮಂಡಲ ಚಾರಿಟೇಬಲ್ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಸಹಯೋಗದಲ್ಲಿ ಆರು ತಿಂಗಳುಗಳಿಂದ ನಡೆಯುತ್ತಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಅ‌.20 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಟ್ರಸ್ಟ್ ನ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ನಿಕಟ ಪೂರ್ವ ಅಧ್ಯಕ್ಷ ಜಯಪ್ರಕಾಶ್, ಟ್ರಸ್ಟಿನ ಉಪಾಧ್ಯಕ್ಷರಾದ ಶಿವರಾಂ ಜಿದ್ಗಲ್, ಖಜಾಂಜಿ ನಾಗರಾಜ್ ಪರಮಲೆ, ಟೈಲರಿಂಗ್ ತರಬೇತಿದರಾದ ಮೀನಾಕ್ಷಿ ಪರಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. .
ಪ್ರಶಿಕ್ಷಣಾರ್ಥಿ ಗಳಾದ ಧನ್ಯಶ್ರೀ ಕೊಂಬಾರು ,ಪೂಜಾ ಪರಮಲೆ,
ಹಂಶಿಕಾ ಬಾಲಾಡಿ,ಅನಿತಾ ಉಜಿರಡ್ಕ
ಅನಿಸಿಕೆ ಯನ್ನು ವ್ಯಕ್ತಪಡಿಸಿದರು. ಟ್ರಸ್ಟಿನ ಹಾಗೂ ಪ್ರತಿಕ್ಷಣಾರ್ಥಿಗಳ ವತಿಯಿಂದ ಹೊಲಿಗೆ ತರಬೇತುದಾರರಾದ ಮೀನಾಕ್ಷಿ ಪರಮಲೆರವರನ್ನು ಸನ್ಮಾನಿಸಲಾಯಿತು. ಪ್ರಶಿಕ್ಷಣಾರ್ಥಿಗಳಾದ ಹಂಸಿಕ ಮತ್ತು ಅನಿತಾ ಪ್ರಾರ್ಥನೆಯನ್ನು ನೆರವೇರಿಸಿದರು.
ಟ್ರಸ್ಟಿನ ನಿರ್ದೇಶಕರಾದ ಚಂದ್ರಶೇಖರ್ ನಾಯರ್ ಸ್ವಾಗತಿಸಿದರು. ಟ್ರಸ್ಟ್ ನ ಉಪಾಧ್ಯಕ್ಷರಾದ ಶಿವರಾಮ್ ಚಿದ್ಗಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು .ನಿರ್ದೇಶಕ ಭರತ್ ನೆಕ್ರಾಜೆ ಧನ್ಯವಾದ ಸಮರ್ಪಿಸಿದರು. ನಿರ್ದೇಶಕ ವಿಜಯಕುಮಾರ್ ಅಮೈ ಕಾರ್ಯಕ್ರಮ ನಿರೂಪಿಸಿದರು ಟ್ರಸ್ಟಿನ ನಿರ್ದೇಶಕರುಗಳಾದ ಮೋಹನ್ ಕೋಟಿಗೌಡನ ಮನೆ, ಕುಮಾರ್ ಪುರ್ಲುಪಾಡಿ, ಶಿವಪ್ರಸಾದ್ ಮಾದನ ಮನೆ ಉಪಸ್ಥಿತರಿದ್ದರು