













ಇತ್ತೀಚೆಗೆ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಕಾಲು ಸಂಕದಿಂದ ಕೆಳಗೆ ಬಿದ್ದು ಸೊಂಟ ಮುರಿತ ಕೊಳಗಾಗಿ ವೀಲ್ ಚೇರ್ ನಲ್ಲಿ ನಡೆದಾಡುವ ಸಾಯಿ ದರ್ಶನ್ ಅವರಿಗೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸಹಾಯಧನ ಅ21 ರಂದು ಹಸ್ತಾಂತರಿಸಲಾಯಿತು.

ಬಿಲದ್ವಾರದ ಸಮೀಪ ಇರುವ ಅವರ ಬಾಡಿಗೆ ಮನೆಗೆ ತೆರಳಿ ಅವರ ತಂದೆ ತಾಯಿಯ ಸಮ್ಮುಖದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ರೋಹಿತ್ ಬಿಬಿ ಸಹಾಯಧನ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ರೋಟರಿ ಜೋನಲ್ ಲೆಫ್ಟಿನೆಂಟ್ ಚಂದ್ರಶೇಖರ ನಾಯರ್, ಪೂರ್ವ ಅಧ್ಯಕ್ಷರುಗಳಾದ ಜಯಪ್ರಕಾಶ್, ವೆಂಕಟೇಶ ಎಚ್ ಎಲ್, ಗೋಪಾಲ ಎಣ್ಣೆ ಮಜಲ್, ಉಪನ್ಯಾಸಕ ಸುಬ್ರಹ್ಮಣ್ಯ ಗೌಡ ಅತ್ಯಾಡಿ ಉಪಸ್ಥಿತರಿದ್ದರು.







