ಪಂಜ ಪರಿಸರದ ನಾಡಹಬ್ಬ 17ನೇ ವರ್ಷದ ಶ್ರೀ ಶಾರದೋತ್ಸವ: ಧಾರ್ಮಿಕ ಸಭಾ ಕಾರ್ಯಕ್ರಮ

0

🔶 ಭಕ್ತಿಯ ಆರಾಧನೆಯಿಂದ ಶ್ರೀ ದೇವಿ ಕಣ್ಣಿನ ರೆಪ್ಪೆಯಂತೆ ನಮ್ಮನ್ನು ಕಾಯುತ್ತಾಳೆ: ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಆಚಾರ್ಯ
🔶 ಭಜನಾ ಮಂದಿರಕ್ಕೆ ಭೂಮಿ ಖರೀದಿಸಲು ಕೈಜೋಡಿಸುವುದು ನಮ್ಮೆಲ್ಲರ ಜವಾಬ್ದಾರಿ : ಸವಿತಾರ ಮುಡೂರು

🔶ಇಂದು ಸಂಜೆ ವೈಭವದ ಶೋಭಾಯಾತ್ರೆ-ಜಲಸ್ತಂಭನ

ಶ್ರೀ ಶಾರದಾಂಬಾ ಭಜನಾ ಮಂಡಳಿ (ರಿ.) ಪಂಜ, ಶ್ರೀ ಶಾರದೋತ್ಸವ ಸಮಿತಿ-2026 ಇದರ ಆಶ್ರಯದಲ್ಲಿ ಪಂಜ ಪರಿಸರದ ನಾಡಹಬ್ಬ17ನೇ ವರ್ಷದ ಶ್ರೀ ಶಾರದೋತ್ಸವವು ಅ. 21 ರಂದು ಸಂಜೆ ತನಕ ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆಯಲಿದೆ. ಆ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ
ನಡೆಯಿತು.


ಚೊಕ್ಕಾಡಿ ಸತ್ಯಸಾಯಿ ವಿದ್ಯಾ ಸಂಸ್ಥೆಯ ಆಧ್ಯಾತ್ಮಿಕ ಸಂಯೋಜಕಿ
ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಆಚಾರ್ಯ
ಧಾರ್ಮಿಕ ಉಪನ್ಯಾಸ ನೀಡಿ
” ಉತ್ಸವಗಳು ಬಂದಾಗ ಮನೆ ಮನಗಳು ಶುಚಿಯಾಗಿರುತ್ತವೆ. ಶ್ರದ್ಧಾ ಭಕ್ತಿಯಿಂದ ದೇವರ ಆರಾಧನೆಯಿಂದ ಜನ್ಮಜನ್ಮಾಂತರದ ಪಾಪಗಳು ದೂರವಾಗುತ್ತದೆ. ಪ್ರತಿಯೊಬ್ಬರ ಹೃದಯದಲ್ಲಿ ತಾಯಿ ಜನಿಸಿದ್ದಾಳೆ. ಭಕ್ತಿಯ ಆರಾಧನೆಯಿಂದ ಶ್ರೀ ದೇವಿ ಕಣ್ಣಿನ ರೆಪ್ಪೆಯಂತೆ ನಮ್ಮನ್ನು ಕಾಯುತ್ತಾಳೆ.” ಎಂದು ಅವರು ಹೇಳಿದರು.


ಮುಖ್ಯ ಅತಿಥಿಯಾಗಿ ಆರಾಧನಾ ಸಮಿತಿ ಅಧ್ಯಕ್ಷ ಸವಿತಾರ ಮೂಡುರು ಮಾತನಾಡಿ “ಪಂಜ ಪರಿಸರದ ಜನತೆಗೆ ಈ ಭಜನಾ ಮಂದಿರ ಅಪಾರ ಕೊಡುಗೆಗಳನ್ನು ನೀಡಿದೆ. ಭಜನಾ ಮಂದಿರಕ್ಕಾಗಿ ಈ ಹಿಂದೆ ಮನೆ ಮನೆ ಭಜನೆಯಿಂದ ದೇಣಿಗೆ ಸಂಗ್ರಹಿಸಿದು ಬಿಟ್ಟರೆ ಬೇರೆ ಯಾವುದೇ ದೇಣಿಗೆ ಸಂಗ್ರಹಿಸಿಲ್ಲ. ಈಗ ಭಜನಾ ಮಂಡಳಿಯ ಋಣ ತೀರಿಸುವ ಸಮಯ ಬಂದಿದೆ. ಭಜನಾ ಮಂದಿರಕ್ಕೆ ಭೂಮಿ ಖರೀದಿಸುವ ಯೋಜನೆಗೆ ಕೈಜೋಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ವಿವರಿಸಿದರು.

ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ “ಭಜನಾ ಮಂದಿರಕ್ಕೆ ಜಾಗ ಖರೀದಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಎಲ್ಲರೂ ಇದರಲ್ಲಿ ಕೈಜೋಡಿಸಬೇಕಾಗಿ ವಿನಂತಿ. ಜಗದ್ಗುರು ಶೃಂಗೇರಿ ಸ್ವಾಮೀಜಿಯವರು ಇಲ್ಲಿಗೆ ಬರುವುದಾಗಿ ನಮ್ಮನ್ನು ಆಶೀರ್ವದಿಸಿ ತಿಳಿಸಿದ್ದಾರೆ. ಎಲ್ಲರೂ ಸಹಕರಿಸಬೇಕು” ಎಂದು ಹೇಳಿದರು.

ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಧರ್ಮಪಾಲ ಮರಕ್ಕಡ ಸಭಾಧ್ಯಕ್ಷತೆ ವಹಿಸಿದ್ದರು.
ಬೆಂಗಳೂರಿನ ಉದ್ಯಮಿ ದಿವಾಕರ ಬರ್ಲಾಯಬೆಟ್ಟು,ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪಂಜ ವಲಯ ಸಂಯೋಜಕಿ ಶ್ರೀಮತಿ ಜಯಶ್ರೀ ಪಂಬೆತ್ತಾಡಿ,ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಜಾಕೆ ಮಾಧವ ಗೌಡ , ಶ್ರೀ ಶಾರದಾಂಬಾ ಭಜನಾ ಮಂಡಳಿಯ ಉಪಾಧ್ಯಕ್ಷ ಪರಮೇಶ್ವರ ಬಿಳಿಮಲೆ,
ಕಾರ್ಯದರ್ಶಿ ಗುರುಪ್ರಸಾದ್ ತೋಟ, ಕೋಶಾಧಿಕಾರಿ ನಾರಾಯಣ ಶೀರಾಜೆ, ಶ್ರೀ ಶಾರದೋತ್ಸವ ಸಮಿತಿ ಪೂರ್ವಾಧ್ಯಕ್ಷ
ದೇವಿಪ್ರಸಾದ್ ಜಾಕೆ, ಉಪಾಧ್ಯಕ್ಷ ಕಾರ್ಯಪ್ಪ ಚಿದ್ಗಲ್ಲು,
ಕಾರ್ಯದರ್ಶಿ ಉಜ್ವಲ್ ಚಿದ್ಗಲ್ಲು, ಕೋಶಾಧ್ಯಕ್ಷರಾದ ಶ್ರೀಮತಿ ನಳಿನಿ ಮಂಚಿಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ:
ಪಂಜ: ಶ್ರೀ ಶಾರದಾಂಬಾ ಭಜನಾ ಮಂಡಳಿ(ರಿ) ಪಂಜ ಇದರ ವತಿಯಿಂದ ಪಂಜ ಕ್ಲಸ್ಟರಿನ ಶಾಲೆಗಳ ಆಯ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.ಕೂತ್ಕುಂಜ ಶಾಲೆಯ ಆತ್ಮಿಕಾ ಜೆ ಎ, ಕರಿಕ್ಕಳ
ಶಾಲೆಯ ಮನ್ವಿತ್ ಕೆ ಸಿ, ಪಂಜ ಶಾಲೆಯ
ಅನನ್ಯ, ಪಾಂಡಿಗದ್ದೆ ಶಾಲೆಯ ಯಶಸ್ವಿ ಕೆ ಯಚ್, ಕಲ್ಮಡ್ಕ ಶಾಲೆಯ ಆದಿತ್ಯ, ಪಡ್ಪಿನಂಗಡಿ ಶಾಲೆಯ ಮಧುಶ್ರೀ, ಪಂಬೆತ್ತಾಡಿ ಶಾಲೆಯ ಜಾನ್ವಿ ಜೆ,
ನಾಗತೀರ್ಥ ಶಾಲೆಯ
ರಿತಿಕಾ ಡಿ ಪುರಸ್ಕಾರ ಸ್ವೀಕರಿಸಿದರು.
ಇದೇ ವೇಳೆ ಬೆಂಗಳೂರಿನ ಉದ್ಯಮಿ ದಾನಿಗಳಾದ ದಿವಾಕರ ಬರ್ಲಾಯಬೆಟ್ಟು
ಆವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗುರು ಪ್ರಸಾದ ತೋಟ ಸ್ವಾಗತಿಸಿದರು. ಪರಮೇಶ್ವರ ಬಿಳಿಮಲೆ ಪ್ರಸ್ತಾವಿಕಗೈದರು. ಜೀವನ್ ಶೆಟ್ಟಿಗದ್ದೆ ನಿರೂಪಿಸಿದರು. ಉಜ್ವಲ್ ಚಿದ್ಗಲ್ಲು ವಂದಿಸಿದರು.
ಸಾಂಸ್ಕೃತಿಕ ಸಂಭ್ರಮ :
ವಿಶ್ವ ಕಲಾನಿಕೇತನ ಕಲ್ಬರಲ್ ಆರ್ಟ್ಸ್ ಪುತ್ತೂರು ಇದರ ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಭರತನಾಟ್ಯ (ನಿರ್ದೇಶನ: ಕರ್ನಾಟಕ ಕಲಾಶ್ರೀ, ವಿದುಷಿ ನಯನ ವಿ. ರೈ, ವಿದುಷಿ ಸ್ವಸ್ತಿಕಾ ಆರ್. ಶೆಟ್ಟಿ).ಮ. ಗಂ2 ರಿಂದ ರಂಜನಿ ಸಂಗೀತ ಸಭಾ ಎಲಿಮಲೆ (ರಿ.) ಇದರ ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಸಂಗೀತ ಗುರುಗಳಾದ ಶ್ರೀಮತಿ ರೇಖಾ ಹೊನ್ನಾಡಿ ಇವರ ನಿರ್ದೇಶನದಲ್ಲಿ ಸ್ವರ ರಾಗ ಸುಧಾ ಕಾರ್ಯಕ್ರಮ. ಅ.ಗಂ 3.ಕಲಾ ಮಂದಿರ್ ಡ್ಯಾನ್ಸ್‌ ಕ್ರಿವ್ ಇದರ ಬೆಳ್ಳಾರೆ ಮತ್ತು ಪಂಜ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಸಂಭ್ರಮ (ಸಂಯೋಜನೆ: ಪ್ರಮೋದ್ ರೈ ಬೆಳ್ಳಾರೆ. ನಿರ್ದೇಶನ: ಅಶೋಕ್ ಬೆಳ್ಳಾರೆ) ನಡೆಯಲಿದೆ.

ಶೋಭಾಯಾತ್ರೆ-ಜಲಸ್ತಂಭನ
ಸಂಜೆ 4.30ರಿಂದ ಶಾರದಾಮಾತೆಯ ವೈಭವದ ಶೋಭಾಯಾತ್ರೆ-ಜಲಸ್ತಂಭನ ನಡೆಯಲಿದೆ.ಕುಣಿತ ಭಜನೆ, ಹುಲಿವೇಷ, ನಾಸಿಕ್ ಬ್ಯಾಂಡ್ ಪ್ರದರ್ಶನ
ವಿಶೇಷ ಆಕರ್ಷಣೆಯಾಗಲಿದೆ.