ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಝೖನಿ ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್ ಕಲ್ಲುಮುಟ್ಲು ಆಯ್ಕೆ















ಸಮಸ್ತ ನೂರನೇ ವರ್ಷ ಸೆಂಟಿನರಿ ಸಮಾವೇಶದ ಪ್ರಚಾರಾರ್ಥ ಅಂಗವಾಗಿ ಸುಳ್ಯ ಗಾಂಧಿನಗರ ಸುನ್ನಿ ಸೆಂಟರ್ ಸಭಾಂಗಣದಲ್ಲಿ ಸುಳ್ಯ ಸರ್ಕಲ್ ಮಟ್ಟದ ಎಕ್ಸಿಕ್ಯೂಟಿವ್ ಕೌನ್ಸಿಲ್ ಸಮಿತಿಯನ್ನು ಅ 21ರಂದು ರಚಿಸಲಾಯಿತು. ಚೇರ್ಮನ್ ಆಗಿ ಅಬ್ದುಲ್ ರಶೀದ್ ಝೖನಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಆಬಿದ್ ಕಲ್ಲುಮುಟ್ಲು, ಕೋಶಾಧಿಕಾರಿಯಾಗಿ ಜಿ ಕೆ ಅಬ್ದುಲ್ ರಜಾಕ್, ಉಪ ಚೇರ್ಮನ್ ರಾಗಿ ಅಬ್ದುಲ್ ಖಾದರ್ ಹಣಗೇರಿ, ಸಿದ್ದಿಕ್ ಕಟ್ಟೆಕ್ಕಾರ್ಸ್, ಜೊತೆ ಕಂನ್ವಿನರ್ ಗಳಾಗಿ ಕಬೀರ್ ಜಟ್ಟಿಪಳ್ಳ, ನೌಶಾದ್ ಕೆರೆಮೂಲೆ, ಸದಸ್ಯರುಗಳಾಗಿ ಅಬ್ದುಲ್ಲಾ ಹಾಜಿ ಜಯನಗರ,ಇಲ್ಯಾಸ್ ಮುಸ್ಲಿಯಾರ್,ಮುಸ್ತಫ ಹಾಜಿ ಮೊಗರ್ಪಣೆ , ಉವೈಸ್ ಗೂನಡ್ಕ,ಹಾರಿಸ್ ಝಂ ಝಂ ಇವರುಗಳನ್ನು ಆಯ್ಕೆ ಮಾಡಲಾಯಿತು.

ಕರ್ನಾಟಕ ರಾಜ್ಯ ಸುನ್ನಿ ಜಮ್ಮಿಯ್ಯತುಲ್ ಮುಅಲ್ಲಿಮೀನ್ ಸಮಿತಿ ನಿರ್ದೇಶನದಂತೆ ಈ ಸಮಿತಿಯನ್ನು ರಚಿಸಲಾಗುತ್ತಿದ್ದು ಸಮಾವೇಶದ ಪ್ರಚಾರಾರ್ಥ ಅಂಗವಾಗಿ ಮದ್ರಸ ಮಟ್ಟದಲ್ಲಿ, ಮತ್ತು ರೇಂಜ್ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜ.03 -2027 ರಂದು
ಓ ಎಸ್ ಬಿ ಎಸ್ ವಿದ್ಯಾರ್ಥಿಗಳ ಸೈಕಲ್ ರ್ಯಾಲಿ,ಮನೆ ಮನೆ ಭೇಟಿ ನೀಡಿ ಕರಪತ್ರ ವಿತರಣೆ
ಪ್ಲೇ ಕಾರ್ಡ್, ಮದ್ರಸ, ಪರಿಸರದಲ್ಲಿ ಪ್ರಚಾರ ಬೋರ್ಡ್, ಬ್ಯಾನರ್, ಫಕ್ಸ್ ಅಳವಡಿಕೆ ಸಂದೇಶ ಭಾಷಣ ನಡೆಯಲಿದೆ.
ಜ 10 ರಂದು ರೇಂಜ್ ಮಟ್ಟದಲ್ಲಿ ಎಸ್ ಬಿ ಎಸ್ ವಿದ್ಯಾರ್ಥಿ ಕಾಲ್ನಡಿಗೆ ಕ್ಯಾಲಿ
ಕರಪತ್ರ ವಿತರಣೆ,ಸಂದೇಶ ಭಾಷಣ,ರೇಂಜ್ ಕೇಂದ್ರೀಕರಿಸಿ ಪ್ರಚಾರ ಬ್ಯಾನರ್, ಪ್ಲಕ್ಸ್ ಅಳವಡಿಕೆ ನಡೆಯಲಿದೆ.
ಜ 16 ರಂದು ಜಿಲ್ಲಾ ಮಟ್ಟದಲ್ಲಿ ಮುಅಲ್ಲಿಂ ಮಸೀರ,ಕರಪತ್ರ ವಿತರಣೆ
ಪ್ಲೇ ಕಾರ್ಡ್ ಪ್ರದರ್ಶನ
ಪ್ರಚಾರ ಸಮಾವೇಶ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ವೇದಿಕೆಯಲ್ಲಿ ಎಸ್ ಜೆ ಎಂ, ಎಸ್ ಎಂ ಎ, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಹಾಗೂ ಎಸ್ ಎಸ್ ಎಫ್ ಸಮಿತಿಯ ಮುಖಂಡರುಗಳು ಉಪಸ್ಥಿತರಿದ್ದರು.







