













ಸುಳ್ಯ ಪೊಲೀಸ್ ಠಾಣೆಗೆ ನೂತನ ಹೆಡ್ ಕಾನ್ಸ್ಟೇಬಲ್ ಆಗಿ ಶ್ರೀಮತಿ ವನಿತಾ ರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇವರು ಮೂಲತಃ ಪುತ್ತೂರು ತಾಲೂಕು ಒಳಮೊಗರು ಗ್ರಾಮದ ವೆಂಕಟೇಶ್ ಹಾಗೂ ರಾಜೀವ ದಂಪತಿಯ ಪುತ್ರಿಯಾಗಿದ್ದು ಕಳೆದ 11 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬಂಟ್ವಾಳ ಪೊಲೀಸ್ ಠಾಣೆ,ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ಹೆಡ್ ಕಾನ್ಸ್ಟೇಬಲ್ ಆಗಿ ಬಡ್ತಿ ಗೊಂಡು ಸುಳ್ಯ ಪೊಲೀಸ್ ಠಾಣೆಗೆ ಬಂದಿರುತ್ತಾರೆ.







