ಆರೋಗ್ಯ ಸುರಕ್ಷಾಧಿಕಾರಿ ಕೆ.ಸಿ.ಬೇಬಿಯವರಿಗೆ ಅಕ್ಸಿಸ್ ಮ್ಯಾಕ್ಸ್ ಸೇವಾ ರತ್ನ ಪ್ರಶಸ್ತಿ

0

ಕಳಂಜ ಹಾಗೂ ಬೆಳ್ಳಾರೆ ಕ್ಷೇತ್ರ ಮಟ್ಟದಲ್ಲಿ ಉತ್ತಮ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಕೆ.ಸಿ. ಬೇಬಿಯವರ ಸೇವೆಯನ್ನು ಗುರುತಿಸಿ, ಅಕ್ಷಿಸ್ ಮ್ಯಾಕ್ಸ್ ಜೀವ ವಿಮೆ ವತಿಯಿಂದ ಆಯೋಜಿಸಲಾದ 332ನೇ ಕಾರ್ಯಕ್ರಮದಲ್ಲಿ ಅಕ್ಷಿಸ್ ಮ್ಯಾಕ್ಸ್ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕ್ಷೇತ್ರ ಮಟ್ಟದಲ್ಲಿ ಆರೋಗ್ಯ ಸೇವೆಯ ಮೂಲಕ ಜನರ ಆರೋಗ್ಯ ಕಾಳಜಿ ಮತ್ತು ಸುರಕ್ಷತೆಗೆ ಉತ್ತಮ ಕೊಡುಗೆ ನೀಡುತ್ತಿರುವ ಶ್ರೀಮತಿ ಕೆ.ಸಿ. ಬೇಬಿಯವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.