













ಸುಳ್ಯ ಶ್ರೀ ಶಾರದಾಂಬ ಸೇವಾ ಸಮೂಹ ಸಮಿತಿಗಳ ಆಶ್ರಯದಲ್ಲಿ ನಡೆದ ದಸರಾ ಉತ್ಸವದ
ಶಾರದಾ ಮಾತೆಯ ಶೋಭಾಯಾತ್ರೆಯ ಪಥಕ್ಕೆ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಅ.24 ರಂದು ಚಾಲನೆ ನೀಡಿದರು.

ಪುರೋಹಿತ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದು ನಂತರ ಅಲಂಕೃತ ಮಂಟಪದಲ್ಲಿ ಶಾರದಾ ಮಾತೆಯ ಮೆರವಣಿಗೆಯು ಆರಂಭಗೊಂಡಿತು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ರವರ ಪುತ್ರ ಕಾರ್ತಿಕ್ ರವರು ಉಪಸ್ಥಿತರಿದ್ದು ಶಾಸಕರೊಂದಿಗೆ ಭಗವಧ್ವಜವನ್ನು ಹಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಸಮಿತಿಯಪದಾಧಿಕಾರಿಗಳಾದಡಾ.ಡಿ.ವಿ.ಲೀಲಾಧರ್, ನಾರಾಯಣ ಕೇಕಡ್ಕ, ಕೃಷ್ಣ ಕಾಮತ್ ಅರಂಬೂರು, ಗೋಕುಲ್ ದಾಸ್, ಎಂ.ಕೆ.ಸತೀಶ್, ನವೀನ್ ಚಂದ್ರ, ಸಂತೋಷ್ ಕುತ್ತಮೊಟ್ಟೆ,
ಬೂಡು ರಾಧಾಕೃಷ್ಣ ರೈ, ರಾಜು ಪಂಡಿತ್, ಸುನಿಲ್ ಕೇರ್ಪಳ, ರವಿಚಂದ್ರ ಕೊಡಿಯಾಲಬೈಲು, ಚಂದ್ರಶೇಖರ ಪಂಡಿತ್, ಶ್ರೀಮತಿ ಲತಾ ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.
ಶೋಭಾಯತ್ರೆಯು ಎ.ಪಿ.ಎಂ.ಸಿ ರಸ್ತೆಯ ಮೂಲಕ ಕೆ.ವಿ.ಜಿ ಜಂಕ್ಷನ್, ವಿವೇಕಾನಂದ ಸರ್ಕಲ್ ಮೂಲಕ ಜೂನಿಯರ್ ಕಾಲೇಜ್ ರಸ್ತೆಯಾಗಿ ಸಾಗಿ ಬಂದು ಮುಖ್ಯ ರಸ್ತೆಗೆ ಸೇರಲಿದೆ.







