ಬೆಳ್ಳಾರೆಯಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಮೂಡಿ ಬಂದ ಡ್ಯಾನ್ಸ್ & ಬೀಟ್ಸ್ ತಂಡ

0

ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ಇದರ 39ನೇ ಶಾರದೋತ್ಸವದ ಪ್ರಯುಕ್ತ ಅ. 21 ರಂದು ಪ್ರಥಮ ಬಾರಿಗೆ ಆಯೋಜಿಸಲ್ಪಟ್ಟ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸ್ಥಳೀಯ ತಂಡವಾದ ಜೀವನ್ ಟಿ. ಎನ್ ಬೆಳ್ಳಾರೆ ಇವರ ಸಾರಥ್ಯದ ಡ್ಯಾನ್ಸ್ & ಬೀಟ್ಸ್ ತಂಡ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ತಂಡವಾಗಿ ಮೂಡಿಬಂದಿದೆ.

ತಂಡದಲ್ಲಿ ಜಾನ್ವಿ, ಅಸ್ಮಿ, ರಿತಿಕ, ಶ್ರಾವ್ಯ, ದಾನ್ವಿ, ಕಂಗನಾ, ಅಪೇಕ್ಷ, ಪ್ರತೀಕ್ಷ, ಮಿಯಾಂಶಿ, ಚೈತಾಲಿ, ವೀಕ್ಷಾ, ಸಮನ್ವಿ, ಶ್ರಾವ್ಯ, ಸಹನ, ಅಶ್ವಿಕ, ಆರಾಧ್ಯ, ಧಾತ್ರಿ, ವಿಲ್ಷಾ, ಅಂಕಿತಾ ಭಾಗವಹಿಸದ್ದರು. ತೀಕ್ಷಣ್ ಆಚಾರ್ಯ ಪುತ್ತೂರು ನೃತ್ಯ ಸಂಯೋಜನೆ ಮಾಡಿ ರಂಜನ್, ಹರೀಶ್, ನಾಗರಾಜ್, ಸತೀಶ್, ತನ್ವಿತ್, ಕೀರ್ತನ್ ಮತ್ತು ಎಲ್ಲಾ ಪೋಷಕರು ಸಹಕರಿಸಿದರು.

ಈ ವರ್ಷದ ನವರಾತ್ರಿ ಸಂದರ್ಭದಲ್ಲಿ ಡ್ಯಾನ್ಸ್ & ಬೀಟ್ಸ್ ತಂಡ ಕಾಪುವಿನ ಮಾರಿಗುಡಿ, ಮಂಗಳೂರಿನ ಕುದ್ರೋಳಿ, ಕೇರ್ಪಡ ಮಹಿಷಮರ್ಧಿನಿ ದೇವಸ್ಥಾನ, ಶ್ರೀ ಕಾವೇರಿ ದಸರಾ ಗೋಣಿಕೊಪ್ಪ, ಮಡಿಕೇರಿ ದಸರಾ ಮತ್ತು ಶ್ರೀ ಶಾರದೋತ್ಸವ ಕಾರ್ಯಕ್ರಮ ದರ್ಖಾಸ್ತು ಬೆಳ್ಳಾರೆಯಲ್ಲಿ ಪ್ರದರ್ಶನ ನೀಡಿತ್ತು.

ಅ. 10 ರಂದು ಸುಳ್ಯದಲ್ಲಿ ನಡೆದ ಮಕ್ಕಳ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮದ ತುಳು ಭಾಷಾ ಗುಂಪು ನೃತ್ಯ ಸ್ಪರ್ಧೆಯಲ್ಲಿ ಡ್ಯಾನ್ಸ್ & ಬೀಟ್ಸ್ ತಂಡದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ್ದರು. ಅ. 9 ರಂದು ಪುತ್ತೂರು ಸುದ್ದಿ ಚಾನೆಲ್ ನವರು ನಡೆಸಿದ ಹೈಸ್ಕೂಲ್ ವಿದ್ಯಾರ್ಥಿಗಳ ಗುಂಪು ನೃತ್ಯ ಸ್ಪರ್ಧೆಯಲ್ಲಿ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ತಂಡವು ವಿಶೇಷ ಪ್ರದರ್ಶನ ಪ್ರಶಸ್ತಿ ಮತ್ತು ಶಾಲಾವಾರು ಗುಂಪು ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ ತಂಡದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಡ್ಯಾನ್ಸ್ & ಬೀಟ್ಸ್ ತಂಡದ ನೃತ್ಯ ಪಟುಗಳು ಆಗಿದ್ದರು. ಡ್ಯಾನ್ಸ್ & ಬೀಟ್ಸ್ ತಂಡವು ನೃತ್ಯ ಸಂಯೋಜನೆ ಮತ್ತು ವೇಷ-ಭೂಷಣಗಳಲ್ಲಿ ಸಹಕರಿಸಿತ್ತು.