🔶ಬೆಳೆಗಾರರೊಂದಿಗೆ ಒಡನಾಟ ಹೊಂದಿರುವ ಸಂಸ್ಥೆ ಕ್ಯಾಂಪ್ಕೊ: ಶಾಸಕಿ ಕು.ಭಾಗೀರಥಿ ಮುರುಳ್ಯ
🔶 ಬದ್ಧತೆ ಇದ್ದಾಗ ಅದ್ಭುತ ಸಾಧನೆಗೆ ಸಹಕಾರ ವಾಗುತ್ತದೆ:ಎಸ್ ಆರ್ ಸತೀಶ್ಚಂದ್ರ
🔶 ಕ್ಯಾಂಪ್ಕೊ ಬೆಳೆಗಾರರನ್ನು ರಕ್ಷಿಸುವ ಸಂಸ್ಥೆ: ಚಂದ್ರಶೇಖರ ಶಾಸ್ತ್ರಿ
“ಕ್ಯಾಂಪ್ಕೊ ಸಂಸ್ಥೆಯು ಉತ್ತಮ ಬೆಲೆಯನ್ನು, ಬೆಳೆಗಾರರಿಗೆ ಉತ್ತಮ ಯೋಜನೆಗಳನ್ನು ನೀಡುತ್ತಾ ಬೆಳೆಗಾರರೊಂದಿಗೆ ಉತ್ತಮ ಒಡನಾಟ ಹೊಂದಿರುವ ಸಂಸ್ಥೆ”. ಎಂದು
ಶಾಸಕಿ ಕು.ಭಾಗೀರಥಿ ಮುರುಳ್ಯ
ಹೇಳಿದರು.ಅವರು ಅ.24 ರಂದು
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ದಿ ಸೆಂಟ್ರಲ್ ಅರೆಕಾನಟ್ ಆಂಡ್ ಕೊಕ್ಕೊ ಮಾರ್ಕೆಟಿಂಗ್ ಆಂಡ್
ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿ. (ಕ್ಯಾಂಪ್ಕೊ),ಮಂಗಳೂರು,
ಪ್ರಾದೇಶಿಕ ಕಚೇರಿ ಪುತ್ತೂರು,ಶಾಖೆ ನಿಂತಿಕಲ್ಲು ಮತ್ತು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಹಕಾರದೊಂದಿಗೆ ಜರುಗಿದ ಸದಸ್ಯ ಬೆಳೆಗಾರರ ಸಭೆಯಲ್ಲಿ ಮಾತನಾಡಿದರು.















ಕ್ಯಾಂಪ್ಕೋ ಆಧ್ಯಕ್ಷರಾದ ಎಸ್ ಆರ್ ಸತೀಶ್ಚಂದ್ರ ಸಭಾಧ್ಯಕ್ಷತೆ ವಹಿಸಿ ಮಾತನಾಡಿ
“ಸಾವಯವ ಕೃಷಿ ಪದ್ಧತಿಯನ್ನು ಮಾಡಿ. ಮಿಶ್ರ ಬೆಳೆಗಳೊಂದಿಗೆ ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ಬದ್ಧತೆ ಎಲ್ಲರಲ್ಲೂ ಇದ್ದಾಗ. ಇನ್ನಷ್ಟು ಅದ್ಭುತ ಸಾಧನೆಗೆ ಸಹಕಾರವಾಗುತ್ತದೆ.” ಎಂದು ಅವರು ಹೇಳಿದರು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಮಾತನಾಡಿ
“ಕ್ಯಾಂಪ್ಕೊ ಮೂಲಕವೇ ಅಡಿಕೆ ನೀಡಿದಾಗ. ಕ್ಯಾಂಪ್ಕೊ ಸಂಸ್ಥೆ
ಬೆಳೆಯುತ್ತದೆ ಮತ್ತು ಸಹಕಾರ ಸಂಘಗಳು ಬೆಳೆಯುತ್ತದೆ. ಕ್ಯಾಂಪ್ಕೊ ಬೆಳೆಗಾರರನ್ನು ರಕ್ಷಿಸುವ ಸಂಸ್ಥೆ.” ಎಂದು ಅವರು ಹೇಳಿದರು.

ಕ್ಯಾಂಫ್ಕೋ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ, ವ್ಯವಸ್ಥಾಪಕ ನಿರ್ದೇಶಕ
ಡಾ. ಬಿ ವಿ ಸತ್ಯನಾರಾಯಣ, ಕ್ಯಾಂಪ್ಕೊ ಮಹಾ ಪ್ರಬಂಧಕರಾದ ಶ್ರೀಮತಿ ರೇಷ್ಮಾ, ಮಲ್ಯ, ಮಾರ್ಕೆಟಿಂಗ್ ಉಪ ಮಹಾ ಪ್ರಬಂಧಕರಾದ ಗೋವಿಂದ ಭಟ್ ಎಸ್, ಕೃಷಿ ಅಧಿಕಾರಿ ಕೃಷ್ಣ, ನಿರ್ದೇಶಕರಾದ ಮಹೇಶ್ ಚೌಟ, ಎ ವಿ ತೀರ್ಥರಾಮ, ಗಣೇಶ್, ಮಾಲಿನಿ ಪ್ರಸಾದ್, ಮುರಳಿಕೃಷ್ಣ ಕೆ ಎನ್,
ವಿಶ್ವನಾಥ್ ಈಶ್ವರ ಹೆಗ್ಡೆ, ವಿವೇಕಾನಂದ ಪಿ, ಗಣೇಶ್ ಪಾರಕಟ್ಟೆ,
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿಪರ ಕೃಷಿಕ ಟಿ. ಆರ್. ಸುರೇಶ್ಚಂದ್ರ, ತೊಟ್ಟೆತೋಡಿ ಮಿಶ್ರ ಬೆಳೆ ಪದ್ಧತಿ ಕುರಿತು ಮಾಹಿತಿ ನೀಡಿದರು.
ಪ್ರಗತಿಪರ ಕೃಷಿಕ ಎ. ಪಿ. ಸದಾಶಿವ ಮರಿಕೆ ಗೋ ಆಧಾರಿತ ಸಾವಯವ ಕೃಷಿ ಕುರಿತು ಮಾಹಿತಿ ನೀಡಿದರು.
ಬಳಿಕ ಸಂವಾದ ಕಾರ್ಯಕ್ರಮ ಜರುಗಿತು.
ಇದೇ ವೇಳೆ ಶಾಸಕಿ ಕು. ಭಾಗೀರಥಿ ಮುರುಳ್ಯ, ಪಂಜ ಪ್ರಾಥಮಿಕ ಕೃಷಿ ಪತ್ತಿನ
ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಟಿ ಆರ್ ಸುರೇಶ್ಚಂದ್ರ ತೊಟ್ಟೆ ತೋಡಿ ಶ್ರೀ ಎ. ಪಿ. ಸದಾಶಿವ ಮರಿಕೆ
ಅವರನ್ನು ಸನ್ಮಾನಿಸಲಾಯಿತು.
ಕ್ಯಾಂಪ್ಕೋ ಆಧ್ಯಕ್ಷರಾದ ಎಸ್ ಆರ್ ಸತೀಶ್ಚಂದ್ರ ಅವರನ್ನು ಗೌರವಿಸಲಾಯಿತು.
ಸದಸ್ಯ ಬೆಳೆಗಾರರಿಗೆ ಕ್ಯಾಂಪ್ಕೊ ಸಂಸ್ಥೆಯ ಸಾಂತ್ವನ ಯೋಜನೆಯಡಿಯಲ್ಲಿ ವಿಶೇಷ ಆರ್ಥಿಕ ನೆರವಿನ ಧನ ಸಹಾಯ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರಾದ ಡಾ. ರಾಮಯ್ಯ ಭಟ್, ಲಕ್ಷ್ಮಿ ನಾರಾಯಣ ನಡ್ಕ, ಶ್ರೀಮತಿ ಹೇಮಲತಾ ವಿ ರೈ, ಆನಂದ ಗೌಡ ಕಂಬಳ, ಬಾಲಕೃಷ್ಣ ಭಟ್ ಕಡಬ ದೀಪ ಬೆಳಗಿಸಿ ಉದ್ಘಾಟಿಸಿದರು.

ಶ್ರೀಮತಿ ಸ್ವಾತಿ ಭಟ್ ಪ್ರಾರ್ಥಿಸಿದರು. ಮುರಳಿಕೃಷ್ಣ ಕೆ ಎನ್
ಸ್ವಾಗತಿಸಿದರು.ಡಾ. ಬಿ ವಿ ಸತ್ಯನಾರಾಯಣ ಪ್ರಾಸ್ತಾವಿಕ ಗೈದರು. ಅಭಿಜಿತ್ ಶೆಟ್ಟಿ ಕೊಂಡಾಣ ನಿರೂಪಿಸಿದರು. ಎ ವಿ ತೀರ್ಥರಾಮ ವಂದಿಸಿದರು.







