













ಸುಬ್ರಹ್ಮಣ್ಯದ ಸಮಾಜ ಸೇವಕ ಡಾl ರವಿಕಕ್ಕೆಪದವು ಅವರ ಮನೆಯಲ್ಲಿ ಅ. 24 ರಂದು 14 ನೇ ವರ್ಷದ ಸತ್ಯನಾರಾಯಣ ಪೂಜೆ ನಡೆಯಿತು. ಆರಂಭದಲ್ಲಿ ಗಣಹವನ ನಡೆಯಿತು.

ಅಲ್ಲದೆ ಕಾರ್ತಿಕೆಯ ಪಾರಾಯಣ ತಂಡದ ಸದಸ್ಯರೆಲ್ಲರೂ ಸೇರಿ, ಭಗವದ್ಗೀತೆಯ ಧ್ಯಾನ ಶ್ಲೋಕದೊಂದಿಗೆ, ಅಧ್ಯಾಯ 9, 12, 15 ಮತ್ತು 18 ರ ಪಾರಾಯಣವು ವಿಷ್ಣುಸಹಸ್ರನಾಮ ಪಾರಾಯಣ ಗೀತಾ ಆರತಿ ಹಾಡು ಮತ್ತು ಶಾಂತಿಮಂತ್ರದೊಂದಿಗೆ ನಡೆಯಿತು. ಬಸವೇಶ್ವರ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ವು ನಡೆದಿದ್ದು. ಭಜನಾ ಮಂಡಳಿಯವರು ಬಸವೇಶ್ವರ ದೇವಾಲಯಕ್ಕೆ ಆರ್ಥಿಕ ಸಹಾಯದ ಬೆನ್ನೆಲುಬಾಗಿ ಸಹಕರಿಸುತ್ತಿರುವುದನ್ನು ಪರಗಣಿಗೆ ರವಿ ಕಕ್ಕೆಪದವು ಅವರು ಭಜನಾ ಮಂಡಳಿಯ ಎಲ್ಲಾ ಸದಸ್ಯರಿಗೆ ಟೀ ಶರ್ಟ್ ನ್ನು ಕೊಡುಗೆಯಾಗಿ ನೀಡಿದರು. ಅಲ್ಲದೆ ಕಳೆದ ಹತ್ತು ವರ್ಷಗಳಿಂದ ಅಡುಗೆ ತಯಾರಿಯಲ್ಲಿ ಸಹಕರಿಸುತ್ತಿರುವ
ಶ್ರೀಪತಿ ಹೊಳ್ಳ ಅವರನ್ನು ಸನ್ಮಾನಿಸಲಾಯಿತು. ನೂರಾರು ಸಂಖ್ಯೆ ಬಂಧುಗಳು, ಮಿತ್ರರು ಕಾರ್ಯಕ್ರಮದಲ್ಲಿ ಭಾಗಿಯಾದರು.









