













ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾನೆಗಳಲ್ಲಿ ಪ್ರಧಾನವಾದ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನವು 2027ರ ಜನವರಿಯಲ್ಲಿ ಅಷ್ಟಬಂಧ ಪುನರ್ ಪ್ರತಿಷ್ಟ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಆ ಪ್ರಯುಕ್ತ ಈಗಾಗಲೇ ಕೆಲವೊಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ.
ಇದೆ ಉಭಯ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಪಂಚಸ್ಥಾಪನೆಗಳ ಆಡಳಿತ ಸಮಿತಿಯ ಮಾಜಿ ಮೊಕ್ತೇಸರರಾಗಿದ್ದ ದಿ. ಯುವರಾಜ ಜೈನ್ ರವರ ಪತ್ನಿ ಶ್ರೀಮತಿ ಪ್ರಸನ್ನ ಯುವರಾಜ ಜೈನ್ ಮತ್ತು ಮಕ್ಕಳು ಈ ಎರಡು ದೇವಸ್ಥಾನಗಳಿಗೆ ತಲಾ ಒಂದು ಲಕ್ಷ ರೂ.ಗಳಂತೆ ಒಟ್ಟು 2 ಲಕ್ಷ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ಕಾಯರ, ಪೂರ್ವಾಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಮಿನುಂಗೂರು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮತ್ತು ಕಾವೂರು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಸನ್ನ ಯುವರಾಜ ಜೈನ್ ರವರ ಪುತ್ರರಾದ ಪ್ರಭಾತ್ ಜೈನ್ ಮತ್ತು ಪ್ರದೀಪ್ ಜೈನ್, ಮುಂಡೋಡಿ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣಕಿಶೋರ್ ಬಾಳಿಲ, ವ್ಯವಸ್ಥಾಪನಾ ಸಮಿತಿ ಸದಸ್ಯ ಸೋಮಪ್ರಸಾದ್ ರೈ ಗೂಡಂಬೆ ಹಾಗೂ ಪ್ರಮುಖರಾದ ಗೋವಿಂದ ಅಳವುಪಾರೆ, ಶಾಂತಪ್ಪ ರೈ ಅಂಗಡಿಮಜಲು, ದಿನೇಶ್ ಗುರುಪು, ಸೀತಾರಾಮ ಸಂಕೇಶ ಉಪಸ್ಥಿತರಿದ್ದರು.







