ಅನ್ನಛತ್ರ ನೂತನ ಕಟ್ಟಡದ ಅಡಿಪಾಯದ ಕಾಮಗಾರಿಗೆ ಶ್ರಮದಾನ














ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚ ಸ್ಥಾಪನೆಗಳಲ್ಲಿ ಪ್ರಧಾನವಾದ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ 2027ರ ಜನವರಿ ತಿಂಗಳಿನಲ್ಲಿ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದ್ದು, ಆ ಪ್ರಯುಕ್ತ ಕ್ಷೇತ್ರದಲ್ಲಿ ಕೆಲವೊಂದು ಅಭಿವೃದ್ಧಿ ಕೆಲಸಗಳು ಆರಂಭಗೊಂಡಿದ್ದು, ಅನ್ನಛತ್ರದ ನೂತನ ಕಟ್ಟಡದ ಅಡಿಪಾಯದ ಕಾಮಗಾರಿಯ ಕೆಲಸವನ್ನು ಬೃಹತ್ ಶ್ರಮದಾನದ ಮೂಲಕ ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಕ್ತರು, ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.







