













ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅ.25 ರಂದು ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದು ಕಂಡು ಬಂತು.
ಬೆಳಗ್ಗೆಯಿಂದಲೇ ಭಕ್ತಾದಿಗಳ ಸರತಿ ಸಾಲು ನಿಧಾನವಾಗಿ ಸಾಗುತ್ತಾ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ತುಲಾಭಾರ ಹಾಗೂ ಅಭಿಷೇಕ ನಡೆದು ಮಹಾಪೂಜೆ ನಡೆಯುವ ಸಮಯದಲ್ಲಿ ಭಕ್ತರ ಪ್ರವೇಶವನ್ನು ತಡೆಗೊಳಿಸಲಾಗಿತ್ತು. ಆ ಹೊತ್ತಿಗೆ ಮತ್ತಷ್ಟು ಭಕ್ತರು ಜಮಾಯಿಸ ತೊಡಗಿದರು. ಮಹಾಪೂಜೆ ಕಳೆದ ತಕ್ಷಣ ಇಡೀ ಹೊರಾಂಗಣದ ಸುತ್ತಮುತ್ತಲ ಭಕ್ತರ ದಂಡೆ ದಂಡು ಕಾಣಿಸಿತ್ತು. ಭೋಜನ ಪ್ರಸಾದಕ್ಕಾಗಿ ಭಕ್ತರಿಗೆ ಷಣ್ಮುಖ ಪ್ರಸಾದ ಭೋಜನ ಶಾಲೆ ಹಾಗೂ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿ ಕೂಡ ಬಫೆ ಸಿಸ್ಟಮ್ ಮಾಡಲಾಗಿತ್ತು.

ತುಂಬಿ ತುಳುಕಿದ ವಾಹನ ಪಾರ್ಕಿಂಗ್ ಪ್ರದೇಶಗಳು.
ವಾಹನ ಪಾರ್ಕಿಂಗ್ ಪ್ರದೇಶಗಳು ಎಲ್ಲೆಡೆಯಲ್ಲಿ ಭರ್ತಿಯಾಗಿದ್ದು ಇತ್ತ ಸವಾರಿ ಮಂಟಪದ ಪಾರ್ಕಿಂಗ್ ಪ್ರದೇಶ, ಮುಖ್ಯ ರಸ್ತೆಯ ರಥಬೀದಿಯಲ್ಲಿರುವ ಪಾರ್ಕಿಂಗ್ ಪ್ರದೇಶಗಳು, ಬಸ್ ಸ್ಟ್ಯಾಂಡ್ ಎದುರುಗಡೆಯ ವಿಶಾಲವಾದ ಪಾರ್ಕಿಂಗ್ ಪ್ರದೇಶ,ಆದಿ ಸುಬ್ರಹ್ಮಣ್ಯ ದೇವಳದ ಸುತ್ತು ಮುತ್ತಲಿನ ಪಾರ್ಕಿಂಗ್ ಪ್ರದೇಶಗಳಲ್ಲೂ ಭಕ್ತರ ವಾಹನಗಳಿಂದ ತುಂಬಿ ತುಳುಕುತ್ತಿದ್ದವು.







