ಪೂದೆ ಅವಳಿ ದೇವಸ್ಥಾನಗಳ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

0

ಮುರುಳ್ಯ, ಪೂದೆ, ಶ್ರೀ ಗಣಪತಿ ಮಲ್ಲಿಕಾರ್ಜುನ ಮತ್ತು ಶ್ರೀ ಮಹಾವಿಷ್ಣು ದೇವಸ್ಥಾನಗಳ ಜೀರ್ಣೋದ್ದಾರ ಕಾಮಗಾರಿಗಳು ಬಹುತೇಕ ಮುಗಿದು ಶೀಘ್ರದಲ್ಲಿ ಬ್ರಹ್ಮ ಕಲಶೋತ್ಸವ ನಡೆಯಲಿರುವುದು.


ಆ ಪ್ರಯುಕ್ತ ವ್ಯವಸ್ಥಾಪನ ಸಮಿತಿಯವರು ಉತ್ಸವ ಸಮಿತಿ ಭಜನಾ ಮಂಡಳಿ ಹಾಗೂ ಶ್ರೀ ದೇವರ ಭಕ್ತರು ದೇವಸ್ಥಾನಕ್ಕೆ ಸಂಬಂಧ ಪಟ್ಟ ಗ್ರಾಮಗಳ ಕೂಡುವಿಕೆಯಲ್ಲಿ ಅ. 25ರಂದು ಪೂರ್ವಭಾವಿ ಸಭೆ ನಡೆಯಿತು.
ಊರ ಭಕ್ತಾದಿಗಳು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.