ಶೆಟ್ಟಿಮಜಲು ಚೈತನ್ಯ ಗೆಳೆಯರ ಬಳಗ ಬೆಳ್ಳಿ ಹಬ್ಬ ಸಂಭ್ರಮ – ಸನ್ಮಾನ

0

ಮಡಪ್ಪಾಡಿ ಗ್ರಾಮದ ಶೆಟ್ಟಿಮಜಲು ಚೈತನ್ಯ ಗೆಳೆಯರ ಬಳಗದ ಬೆಳ್ಳಿ ಹಬ್ಬ ಸಂಭ್ರಮ – ಸನ್ಮಾನ, ಕ್ರೀಡಾಕೂಟ ಕಾರ್ಯಕ್ರಮ ಅ.25ರಂದು ಶೆಟ್ಟಿಮಜಲಿನಲ್ಲಿ ನಡೆಯಿತು.

ಚೈತನ್ಯ ಗೆಳೆಯರ ಬಳಗದ ಅಧ್ಯಕ್ಷ ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು.
ಮಡಪ್ಪಾಡಿ ಸಹಕಾರ ಸಂಘದ‌ ನಿರ್ದೇಶಕ ಸೋಮಶೇಖರ ಕೇವಳ ಉದ್ಘಾಟನೆ ನೆರವೇರಿಸಿದರು.
ಮಡಪ್ಪಾಡಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ್, ಮಡಪ್ಪಾಡಿ ಶಾಲೆಯ ಮುಖ್ಯ ಶಿಕ್ಷಕ ಕುಶಾಲಪ್ಪ ಗೌಡ ಪಾರೆಪ್ಪಾಡಿ, ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಚೈತನ್ಯ ಗೆಳೆಯರ ಬಳಗದ ಸ್ಥಾಪಕ ಸಂಚಾಲಕ ನಾಗೇಶ್ ಪೈಲೂರು, ಸುಳ್ಯ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಲೋಹಿತ್ ಬಾಳಿಕಳ ವೇದಿಕೆಯಲ್ಲಿ ಇದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಚೈತನ್ಯ ಗೆಳೆಯರ‌ ಬಳಗದ ಕಾರ್ಯದರ್ಶಿ ಜಯಚಂದ್ರ ನರ್ಪ ಅಧ್ಯಕ್ಷತೆ‌ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಸಕಿ‌ ಭಾಗೀರಥಿ‌ ಮುರುಳ್ಯ, ಎ.ಸಿ.ಎಫ್. ಪ್ರಶಾಂತ್ ಪೈ, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಮಡಪ್ಪಾಡಿ ಸಹಕಾರ ಸಂಘದ ಅಧ್ಯಕ್ಷ ವಿನಯ ಕುಮಾರ್‌ ಮುಳುಗಾಡು, ದೇವಚಳ್ಳ ಗ್ರಾ.ಪಂ. ಮಾಜಿ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸುಳ್ಯ ವೆಂಕಟರಮಣ ಸೊಸೈಟಿ ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ಮಡಪ್ಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಚಂದ್ರಮತಿ ಪೂಂಬಾಡಿ, ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷ ಸುಮಂತ್ ಶೀರಡ್ಕ, ಚೈತನ್ಯ ಗೆಳೆಯರ ಬಳಗದ ಉಪಾಧ್ಯಕ್ಷ ಕುಸುಮಾಧರ ಶೆಟ್ಟಿಮಜಲು ಮೊದಲಾದವರು ಉಪಸ್ಥಿತರಿದ್ದರು.

ನಿವೃತ್ತ ವೈದ್ಯಾಧಿಕಾರಿ ಡಾ.ನಂದಕುಮಾರ್, ಕರಕುಶಲ‌ ಕಲಾ ಪರಿಣಿತರಾದ ಧರ್ಮಪಾಲ ಗೌಡ ಕರಂಗಲಡ್ಕ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.