ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಸಾಮೂಹಿಕ ಸಂಕಲ್ಪದ ನಿರ್ಧಾರ

0

ಭಕ್ತರೊಂದಿಗೆ ಸೇರಿ ನ್ಯಾಯಬದ್ಧ ಹೋರಾಟ ಮಾಡಲಾಗುವುದು : ಪ್ರಸನ್ನ ದರ್ಬೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಸಾಮೂಹಿಕ ಸಂಕಲ್ಪದ ನಿರ್ಧಾರ ಮಾಡಿರುವುದಕ್ಕೆ ಕುಕ್ಜೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಪ್ರಸನ್ನ ದರ್ಬೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತುಳುನಾಡಲ್ಲಿ ಬಲಿ ಅಂದರೆ ದೇವರ ಆರಾಧನೆ. ನಾಗನ ಸಾನಿಧ್ಯ ಇರುವ ಜಾಗದಲ್ಲಿ ಈ ಆಶ್ಲೇಷ ಬಲಿ ಪೂಜೆಯನ್ನು ಮಾಡುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಪೂಜೆಯನ್ನು ಮಾಡಲು ಹಲವು ಕಾರಣಗಳಿವೆ. ಈ ಜನ್ಮದಲ್ಲಿ ಅಥವಾ ಹಿಂದಿನ ಜನ್ಮದಲ್ಲಿ ಹಾವು ಕೊಂದಿದ್ದರೆ, ಹಾವಿನ ಮೊಟ್ಟೆ ಒಡೆದಿದ್ದರೆ, ಹುತ್ತ ಒಡೆದಿದ್ದರೆ ಸರ್ಪ ದೋಷ ಬರುತ್ತದೆ. ಮನೆ ಕಟ್ಟುವಾಗ ನಾಗನ ಸ್ಥಾನಕ್ಕೆ ತೊಂದರೆ ಆಗಿದ್ದರೆ ನಾಗ ದೋಷ ಬರುತ್ತದೆ. ಜಾತಕದಲ್ಲಿ ಎಲ್ಲಾ ಗ್ರಹಗಳು ರಾಹು-ಕೇತು ಮಧ್ಯೆ ಸಿಕ್ಕಿಕೊಂಡಿದ್ದರೆ ಕಾಲ ಸರ್ಪ ದೋಷ ಬರುತ್ತದೆ. ಮದುವೆ ಆಗದೇ ಅಥವಾ ಮದುವೆ ತಡ ಆಗುತ್ತಿದ್ದರೆ ಕುಜ ದೋಷ / ಮಂಗಳ ದೋಷ ಇರುತ್ತದೆ. ಮಕ್ಕಳು ಆಗದೇ, ಗರ್ಭ ನಿಲ್ಲದೇ ಇದ್ದರೆ ಸಂತಾನ ದೋಷ ಇರುತ್ತದೆ. ಹಾವಿಗೆ ತೊಂದರೆ ಮಾಡಿ ಚರ್ಮ ರೋಗ ಬಂದಿದ್ದರೆ – ಈ ಎಲ್ಲಾ ಕಾರಣಗಳಿಗೆ ಜ್ಯೋತಿಷಿಗಳು ಈ ಪೂಜೆಯನ್ನು ಮಾಡಲು ಹೇಳುತ್ತಾರೆ.
ಇಲ್ಲಿ ಅರ್ಚಕರು ಪ್ರತಿ ನಾಗಗಳಿಗೂ ಅದರ ಹೆಸರನ್ನು ಹೇಳುತ್ತಾ ಬಲಿ ನೀಡಿ ಸಂತೃಪ್ತಿ ಕೊಡುತ್ತಾರೆ. ಈ ಪೂಜೆ ಮಾಡಿಸುವಾಗ ಪ್ರತ್ಯೇಕ ಸಂಕಲ್ಪ ಅತ್ಯಗತ್ಯ. ಯಾಕೆಂದರೆ ಪ್ರತಿಯೊಬ್ಬರಿಗೂ ಬೇರೆ ಬೇರೆ ಕಾರಣಗಳಿರುತ್ತವೆ. ಒಬ್ಬರಿಗೆ ಮದುವೆ ಆಗಬೇಕು, ಇನ್ನೊಬ್ಬರಿಗೆ ಮಕ್ಕಳು ಆಗಬೇಕು, ಮತ್ತೊಬ್ಬರಿಗೆ ಸರ್ಪ ದೋಷ ಹೋಗಬೇಕು. ಎಲ್ಲರಿಗೂ ಒಂದೇ ಸಂಕಲ್ಪ ಹೇಗೆ ಸಾಧ್ಯ?*
ಆದರೆ ಇವಾಗ ಕುಕ್ಕೆಯಲ್ಲಿ ಸಾಮೂಹಿಕ ಸಂಕಲ್ಪ ಶುರುವಾಗಿದೆ. ಭಕ್ತರು ತುಂಬಾ ಬರ್ತಾರೆ ಎಂಬ ಕಾರಣ ಕೊಡುತ್ತಿರುವ ಇವರು ವ್ಯವಸ್ಥೆ ಮಾಡಲು ಕಷ್ಟ ಎಂದು ಹೇಳುವ ಇವರಿಗೆ ನಾಚಿಕೆ ಆಗಬೇಕು
ಹಿಂದಿನಿಂದ ಬಂದ ಪದ್ಧತಿ. ಯಾರೂ ತಮ್ಮ ಇಷ್ಟದ ಪ್ರಕಾರ ದೇವಾಲಯದ ಪದ್ಧತಿಯನ್ನು ಬದಲಿಸಲು ಸಾಧ್ಯವಿಲ್ಲ.
ದೇವಾಲಯಕ್ಕೆ ಹಿಂದಿನಿಂದ ಬಂದ ದಿಟ್ಟಂ ಇದೆ. ದಿಟ್ಟಂ ಅಂದರೆ ಹಿಂದಿನಿಂದ ಬಂದಂತಹ, ಬರೆದಿಟ್ಟಿರುವಂತಹ ಪೂಜಾ ಪದ್ಧತಿಯ ರೀತಿ ರಿವಾಜು. ಅದನ್ನೆಲ್ಲ ಬಿಟ್ಟು ಬೇಕಾದ ಹಾಗೆ ಬದಲಿಸಿಕೊಂಡು ಹೋಗಲು ದೇವಾಲಯ ಯಾರದ್ದೋ ಸ್ವಂತ ಆಸ್ತಿ ಅಲ್ಲ. ಅದು ಸಮಸ್ತ ಹಿಂದೂ ಧರ್ಮದ ಆಸ್ತಿ. ಇಲ್ಲಿ ಆಡಳಿತ ಮಾಡುವ ಅಧಿಕಾರಿಗಳೇ, ದೇವರು ಏನು ನಿಮ್ಮ ಅಧೀನದಲ್ಲಿ ಇರುವುದಲ್ಲ. ಆ ದೇವರ ಹಣದಲ್ಲಿ ಸಂಬಳ ಪಡೆಯುವವರು ನೀವು. ದೇವರಿಗೆ ಅದರದ್ದೇ ಆದ ರೀತಿಯಲ್ಲಿ ಪೂಜಾ ಪದ್ಧತಿಗಳು ನಡೆಯಲೇ ಬೇಕು. ಇದು ಎಲ್ಲಾ ಭಕ್ತರ ಒತ್ತಾಯ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಯಾವ ರೀತಿಯ ನ್ಯಾಯಬದ್ಧ ಹೋರಾಟಕ್ಕೆ ಕೂಡ ತಯಾರಿದ್ದೇವೆ.
ಸಂಕಲ್ಪ ಮಾಡುವವರಿಂದ ತೊಂದರೆ ಇದ್ದರೆ ಅವರನ್ನು ಬದಲಾಯಿಸಿ, ಅವರನ್ನು ಬೇಕಾದರೆ ಮನೆಗೆ ಕಳುಹಿಸಿ. ಅದು ಬಿಟ್ಟು ಸಂಕಲ್ಪವನ್ನೇ, ದೇವಾಲಯದ ಪದ್ಧತಿಯನ್ನೇ ವಿರೂಪ ಮಾಡಲು ಹೊರಟಿರುವುದು ಸರಿಯಲ್ಲ
ಈಗಿನ ಸರಕಾರ ಬಂದಮೇಲೆ ಅಂತೂ ಹಿಂದೂ ದೇವಾಲಯವನ್ನು ದುಡ್ಡು ಮಾಡುವ ವ್ಯಾಪಾರ ಕೇಂದ್ರ ಅಂತ ತಿಳ್ಕೊಂಡ ಹಾಗೆ ಇದೆ. ದೇವಾಲಯದ ದುಡ್ಡಿನಲ್ಲಿ ದುಂದುವೆಚ್ಚ ಮಾಡುವುದನ್ನು ಬಿಟ್ಟು ದೇವಾಲಯದ ಅಗತ್ಯ ಏನಿದೆಯೋ, ಅಥವಾ ಭಕ್ತರಿಗೆ ಏನು ಬೇಕೋ ಅದನ್ನು ನೀಡಲು ಪ್ರಯತ್ನಿಸಿ. ಆಶ್ಲೇಷ ಬಲಿ ಪೂಜೆಯಲ್ಲಿ ಪ್ರತ್ಯೇಕ ಸಂಕಲ್ಪವನ್ನು ತಕ್ಷಣ ಮರು ಜಾರಿ ಮಾಡಬೇಕು. ದೇವಾಲಯದ ದಿಟ್ಟಂಗೆ ವಿರುದ್ಧವಾದ ಸಾಮೂಹಿಕ ಸಂಕಲ್ಪ ಪದ್ಧತಿಯನ್ನು ಕೂಡಲೇ ಕೈಬಿಡಬೇಕು.ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಪದ್ಧತಿಯನ್ನು ಬದಲಾಯಿಸಬಾರದು, ಬದಲಿಗೆ ವ್ಯವಸ್ಥೆಯನ್ನು ಹೆಚ್ಚು ಮಾಡಬೇಕು.ದೇವಾಲಯದ ಹಣವನ್ನು ಭಕ್ತರ ಸೌಕರ್ಯಕ್ಕೆ, ದೇವಾಲಯದ ಅಭಿವೃದ್ಧಿಗೆ ಬಳಸಬೇಕು, ದುಂದುವೆಚ್ಚಕ್ಕೆ ಅಲ್ಲ ಎಲ್ಲವನ್ನು ಸರಿಪಡಿಸಿ ಹಿಂದಿನಂತೆ ಜಾರಿಯಾಗಬೇಕು ಇಲ್ಲದಿದ್ದರೆ ಭಕ್ತರೊಂದಿಗೆ ಸೇರಿ ನ್ಯಾಯಬದ್ಧ ಹೋರಾಟ ಮಾಡಲಾಗುವುದು ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.