













ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ 14 ಮತ್ತು
17 ರ ವಯೋಮಾನದ ಮಡಿಕೇರಿ ತಾಲೂಕು ಮಟ್ಟದ ಕ್ರೀಡಾಕೂಟ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೊಡಗು ಜಿಲ್ಲೆ ಮಡಿಕೇರಿ, ಜ್ಯೋತಿ ಪ್ರೌಢಶಾಲೆ ಪೆರಾಜೆ ಇದರ ಸಂಯುಕ್ತ ಆಶ್ರಯದಲ್ಲಿ ಆಶ್ರಯದಲ್ಲಿ
ಜ್ಯೋತಿ ಪ್ರೌಢಶಾಲೆಯಲ್ಲಿ ಅ.24 ರಂದು ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯಿಂದ ಜ್ಯೋತಿಯನ್ನು ರಾಜ್ಯಮಟ್ಟದಲ್ಲಿ ಭಾಗವಹಿಸಿದ ನಮ್ಮ ಪ್ರೌಢಶಾಲಾ ವಿದ್ಯಾರ್ಥಿಗಳು ಶಾಲಾ ಮೈದಾನಕ್ಕೆ ತರಲಾಯಿತು. ಬಳಿಕ ವೇದಿಕೆಯಲ್ಲಿ ದೀಪ ಪ್ರಜ್ವಲನೆ ಯನ್ನು ಜ್ಯೋತಿ ವಿದ್ಯಾ ಸಂಘದ ಹಿರಿಯ ನಿರ್ದೇಶಕರಾದ ಎನ್ .ಎ ರಾಮಚಂದ್ರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರದಲ್ಲಿ ಜ್ಯೋತಿ ವಿದ್ಯಾಸಂಘದ ನಿರ್ದೇಶಕರು ಶಾಲಾ ಸಂಚಾಲಕರಾದ ಮಹೇಶ್ ಕುಮಾರ್ ಮೇನಾಲ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿದರು. ಸಭಾ ಕಾರ್ಯಕ್ರಮ ನಡೆದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಮಹೇಶ್ ಆರ್ ಪಿ ವಹಿಸಿದ್ದರು. ವೇದಿಕೆಯಲ್ಲಿ ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷರಾದ ರಾಕೇಶ್ ರೈ , ಕಾರ್ಯದರ್ಶಿಯವರಾದ ರಕ್ಷಿತ್ ಕೆ ಪಿ ನಿರ್ದೇಶಕರಾದ ಹಾಗೂ ಶಾಲಾ ಸಂಚಾಲಕರಾದ ಮಹೇಶ್ ಕುಮಾರ್ ಮೇನಾಲ ನಿರ್ದೇಶಕರಾದ ದೀಪಕ್ ನಾಗರಾಜ್ ಎನ್ ಎ ಜ್ಞಾನೇಶ್ , ಅನುಷ್ ಆರ್ , ರಾಜ್ಯ ಶಿಕ್ಷಕ ರ ಸಂಘದ ಅಧ್ಯಕ್ಷರಾದ ಮೋಹನ್ ಪಿ ವಿ ಮಡಿಕೇರಿ ತಾಲೂಕಿನ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರುಗಳು ಎಲ್ಲಾ ದೈಹಿಕ ಶಿಕ್ಷಕ ಪದಾಧಿಕಾರಿಗಳು ಪ್ರೌಢಶಾಲಾ ಶಿಕ್ಷಕರ ಕೊಡಗು ಇದರ ಜಿಲ್ಲಾಧ್ಯಕ್ಷರಾದ ಕುಮಾರ್ ಹೆಚ್ ಜಿ , ಜ್ಯೋತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜಿ ಆರ್ ನಾಗರಾಜ್, ಪ್ರೌಢ ಶಾಲೆಯಲ್ಲಿ ಈ ಹಿಂದೆ ದುಡಿದಂತಹ ಎಲ್ಲ ನಿರ್ದೇಶಕರುಗಳು ಸ್ಥಾಪಕ ಅಧ್ಯಕ್ಷರಾದ ಡಿ ಪಿ ಪೂವಪ್ಪ ,ಎಲ್ಲಾ ದೈಹಿಕ ಶಿಕ್ಷಕ ತಾಲೂಕು ಪರಿವೀಕ್ಷಕರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಮಹೇಶ್ ಆರ್ ಪಿ ಅವರು ಅಧ್ಯಕ್ಷೀಯ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾಕೂಟಕ್ಕೆ ಶುಭಹಾರೈಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಹಾಗೂ ಎಲ್ಲಾ ವ್ಯವಸ್ಥೆಗಳನ್ನು ಪ್ರಣವ್ ಫೌಂಡೇಶನ್ ರಿ. ಬೆಂಗಳೂರು ಸಹಯೋಗದಲ್ಲಿ ಜ್ಯೋತಿ ವಿದ್ಯಾ ಸಂಘ ರಿ. ಪೆರಾಜೆ ಇದರ ವತಿಯಿಂದ ನೀಡಲಾಗಿತ್ತು. ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಗಿ ಮುಖ್ಯ ಶಿಕ್ಷಕರಾದ ಜಿ ಆರ್ ನಾಗರಾಜ್ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕರಾದ ಅರ್ಚನಕುಮಾರಿ ಹಾಗೂ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ನಿತಿನ್ ಎಂಎಂ ಕ್ರೀಡಾಕೂಟದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ್ದರು.
ಶಿಕ್ಷಕರಾದ ಸುಪಣೃ. ಶೃತಿ ಎನ್ ಜಿ ಜಯ ನಾಯಕ್, ರಾಕೇಶ್ ಕೆ ಬಿ , ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲಾಶಿಕ್ಷಕಿ ಶ್ರೀಲತಾ ಬಿ ಡಿ. ಹಾಗೂಸಿಬ್ಬಂದಿ ವರ್ಗದವರು ಸಹಕರಿಸಿದ್ದರು. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.







