ಐವರ್ನಾಡು ಗ್ರಾಮಸ್ಥರಿಂದ ಲೈನ್ ಮ್ಯಾನ್ ಗಳನ್ನು ಒದಗಿಸಿಕೊಡುವಂತೆ ಮೆಸ್ಕಾಂಗೆ ಮನವಿ

0

ಒಂದು ವಾರದೊಳಗೆ ಲೈನ್ ಮ್ಯಾನ್ ಗಳನ್ನು ಒದಗಿಸಿಕೊಡುವ ಭರವಸೆ ನೀಡಿದ ಮೆಸ್ಕಾಂ ಎ.ಇ.ಇ

ಐವರ್ನಾಡು ಗ್ರಾಮದಲ್ಲಿ ಲೈನ್ ಮ್ಯಾನ್ ಗಳಿಲ್ಲದೆ ವಿದ್ಯುತ್ ಸಮಸ್ಯೆಯಾಗುತ್ತಿದ್ದು ಕೂಡಲೇ ಲೈನ್ ಮ್ಯಾನ್ ಗಳನ್ನು ಒದಗಿಸಿಕೊಡಬೇಕೆಂದು ಐವರ್ನಾಡಿನ ಗ್ರಾಮಸ್ಥರು ಮೆಸ್ಕಾಂ ಎ.ಇ.ಇ‌ ಹರೀಶ್ ನಾಯ್ಕ್ ರವರಿಗೆ ಅ.27 ರಂದು ಮನವಿ ನೀಡಿದರು.


ಮನವಿ ಸ್ವೀಕರಿಸಿದ ಎ.ಇ.ಇ.ಯವರು ಲೈನ್ ಮ್ಯಾನ್ ಗಳಿಗೆ ವರ್ಗಾವಣೆಯಾದ ಕಾರಣ ತೊಂದರೆಯಾಗಿದೆ.
ಒಂದು ವಾರದೊಳಗೆ ಲೈನ್ ಮ್ಯಾನ್ ಗಳನ್ನು ಒದಗಿಸುವುದಾಗಿ ಮತ್ತು ಹಳೆವಯರ್ ಗಳನ್ನು ಬದಲಾವಣೆ ಮಾಡಿ ಕೊಡುವುದಾಗಿ ಹಾಗೂ ವಾಹನದ ವ್ಯವಸ್ಥೆ,ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣದ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಭರವಸೆ ನೀಡಿದರು.
ಗ್ರಾಮಸ್ಥರು ನೀಡಿದ ಮನವಿಯಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆ ಮೆಸ್ಕಾಂ ಶಾಖಾ ವ್ಯಾಪ್ತಿಗೆ ಒಳಪಟ್ಟ ಐವರ್ನಾಡು ಗ್ರಾಮಕ್ಕೆ ಇದ್ದ ಒಬ್ಬ ಲೈನ್ ಮ್ಯಾನ್‌ ಇತ್ತೀಚೆಗೆ ವರ್ಗಾವಣೆಯಾಗಿದ್ದು, ಈಗ ನಮ್ಮ ಗ್ರಾಮಕ್ಕೆ ಲೈನ್ ಮ್ಯಾನ್‌ಗಳು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ, ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 100 ಕ್ಕೂ ಅಧಿಕ ಪರಿವರ್ತಕಗಳಿದ್ದು ಸುಮಾರು ಕಿಲೋಮೀಟರ್ ಗಟ್ಟಲೆ HT/LT ವಿದ್ಯುತ್ ಲೈನ್ ಇರುತ್ತದೆ, ವಿದ್ಯುತ್ ಲೈನ್ ನಿರ್ವಹಣೆಗೆ ತಕ್ಷಣ 3 ಜನ ಲೈನ್ ಮ್ಯಾನ್‌ಗಳನ್ನು ತಕ್ಷಣವೇ ಒದಗಿಸಿಕೊಡಬೇಕು ಗ್ರಾಮದಲ್ಲಿರುವ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಿಕೊಡಬೇಕು ಹಾಗೂ ಹಳೆಯ ವಿದ್ಯುತ್ ತಂತಿಗಳನ್ನು ತಕ್ಷಣ ಬದಲಾಯಿಸಿ ಹೊಸ ತಂತಿಗಳನ್ನು ಆಳವಡಿಸಿಕೊಡಬೇಕು ಹಾಗೂ ಈಗಾಗಲೇ ಗ್ರಾಮ ಪಂಚಾಯತ್‌ಯ ವಿದ್ಯುತ್ ಕುಡಿಯುವ ನೀರಿನ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ಈಗಾಗಲೇ ಕುಡಿಯುವ ನೀರಿಗೆ ತೊಂದರೆಯಾಗಿದೆ, ಹಾಗೂ ವಿದ್ಯುತ್ ಲೈನ್‌ಗಳನ್ನು ತುರ್ತು ದುರಸ್ಥಿ ಮಾಡಲು ಬೆಳ್ಳಾರೆ ಮೆಸ್ಕಾಂಗೆ ವಾಹನದ ವ್ಯವಸ್ಥೆ ಮಾಡಬೇಕು ಗ್ರಾಮದ ಎಲ್ಲಾ ವಿದ್ಯುತ್ ಸಮಸ್ಯೆಗಳಿಗೆ ಕೂಡಲೇ ಸ್ಪರಿದಿಸಬೇಕು, ಇಲ್ಲದಿದ್ದರೆ ನಾವೆಲ್ಲರೂ ಮೆಸ್ಕಾಂ ಕಛೇರಿಯ ಮುಂಭಾಗ ಪ್ರತಿಭಟನೆ ಮಾಡಲಾಗುವುದು, ಹಾಗೂ ನಮ್ಮ ಗ್ರಾಮದ ಮುಚ್ಚಿನಡ್ಕ ಎಂಬಲ್ಲಿ ವಿದ್ಯುತ್ ಸಬ್‌ಸ್ಟೇಷನ್‌ ನಿರ್ಮಿಸಿ ನಮ್ಮ ಗ್ರಾಮದ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯರಾದ
ಮಾಧವ ಭಟ್ ಶೃಂಗೇರಿ ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ, ಶ್ರೀಮತಿ ಸುಜಾತ ಪವಿತ್ರಮಜಲು,ಶ್ರೀಮತಿ ಲೀಲಾವತಿ ಕುತ್ಯಾಡಿ,ಮಾಜಿ ಉಪಾಧ್ಯಕ್ಷ ಶಾಂತಾರಾಮ ಕಣಿಲೆಗುಂಡಿ, ಮಾಜಿ ಸದಸ್ಯರಾದ ರಂಜನ್ ಮೂಲೆತೋಟ,ದೇವಿಪ್ರಸಾದ್ ಕೊಪ್ಪತ್ತಡ್ಕ, ಸಹಕಾರಿ ಸಂಘದ ನಿರ್ದೇಶಕರಾದ ಸತೀಶ್ ಎಡಮಲೆ,ಪುರಂದರ ಶಾಂತಿಮೂಲೆ,ಅನಂತ ಖಂಡಿಗೆಮೂಲೆ,ಗೋಪಾಲಕೃಷ್ಣ ಚೆಮ್ನೂರು ,ಚಂದ್ರಕಾಂತ ಕೋಡ್ತೀಲು,ವಿನಯ ಕೋಡ್ತೀಲು,ತೀರ್ಥಪ್ರಸಾದ್,ಪ್ರಮೋದ್ ಪಾಲೆಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.