ಗ್ಯಾರಂಟಿ ಸಮಿತಿ ಸಭೆಯಲ್ಲಿ ನಿರ್ಧಾರ
ಸುಳ್ಯದಲ್ಲಿ ನ.12ರಂದು ಉದ್ಯೋಗ ಮೇಳ ನಡೆಸಲಾಗುತ್ತದೆ.
ಅ.27ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.














ಸಭೆಯ ಅಧ್ಯಕ್ಷತೆ ವಹಿಸಿದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧದಯಕ್ಷ ಪಿ.ಎಸ್.ಗಂಗಾಧರ್ ರವರು, “ಸುಳ್ಯದ ಯುವ ಸಮುದಾಯಕ್ಕೆ ಉದ್ಯೋಗ ಕೊಡಿಸಬೇಕೆಂಬ ನಿಟ್ಟಿನಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲು ನಿರ್ಧಾರಿಸಲಾಗಿದೆ. ಅದಕ್ಕಾಗಿ ದಿನಾಂಕವನ್ನು ನಿರ್ಧರಿಸೋಣ” ಎಂದು ಹೇಳಿದರು.
ಬಳಿಕ ಸಭೆಯಲ್ಲಿ ಸಮಾಲೋಚನೆ ನಡೆದು ನ.12ರಂದು ಉದ್ಯೋಗ ಮೇಳ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಎಂಪ್ಲಾಯಿಮೆಂಟ್ ಅಧಿಕಾರಿ ಅರುಣ್ ಕುಮಾರ್ರವರು “ಉದ್ಯೋಗ ಮೇಳಕ್ಕೆ ಆಗಬೇಕಾದ ಸಿದ್ಧತೆಗಳ ಕುರಿತು ವಿವರ ನೀಡಿದರಲ್ಲದೆ, ಬೆಂಗಳೂರು, ಮಂಗಳೂರು ಕಂಪೆನಿಗಳು ಆಗಮಿಸುವ ಕುರಿತು ವಿವರ ನೀಡಿದರು.
ಸುಳ್ಯಕ್ಕೆ ಕಂಪೆನಿಗಳು ಅಂತಿಮವಾದ ತಕ್ಷಣ ಅದರ ಪಟ್ಟಿ ದೊರೆತ ತಕ್ಷಣ ಕಾಲೇಜುಗಳಿಗೆ ಭೇಟಿ ನೀಡಿ ಜನರನ್ನು ಬರುವಂತೆ ಮಾಡೋಣ. ಎಲ್ಲರೂ ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸೋಣ” ಎಂದು ಪಿ.ಎಸ್.ಗಂಗಾಧರ್ ಕೇಳಿಕೊಂಡರು.
ಇ.ಒ. ರಾಜಣ್ಣರವರು ಗ್ರಾ.ಪಂ., ಸಂಜೀವಿನಿ ಒಕ್ಕೂಟ, ಮಾಧ್ಯಮಗಳು ಸೇರಿದಂತೆ ಪ್ರಚಾರ ನಡೆಸುವ ಕುರಿತು ವಿವರ ನೀಡಿದರು.
ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಪ್ರವೀಣ ಮರುವಂಜ, ಲೀಲಾ ಮನಮೋಹನ್ ಮುಡೂರು,
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರುಗಳಾದ ಜಂಶೀರ್ ಶಾಲೆಕ್ಕಾರ್, ಸುರೇಶ್ ಎಂ.ಹೆಚ್. ಅಮೈ, ತಿರುಮಲೇಶ್ವರಿ ಅರ್ಬಡ್ಕ, ಮುತ್ತಪ್ಪ ಪೂಜಾರಿ, ಪ್ರಶಾಂತ್ ರೈ ಮರುವಂಜ, ಗಣೇಶ್ ನಾಗಪಟ್ಟಣ, ಕುಸುಮಾಧರ ಕೆರೆಯಡ್ಕ, ಸನತ್ ಮುಳುಗಾಡು, ಶಶಿಕಲಾ ದೇರಪ್ಪಜ್ಜನಮನೆ, ಸಂಧ್ಯಾ ದೋಳ, ಜೂಲಿಯಾನ ಕ್ರಾಸ್ತ ಸಲಹೆ ನೀಡಿದರು.
ಎನ್.ಎಂ.ಸಿ. ಪ್ರಾಂಶುಪಾಲ ಡಾ.ಎಂ.ಎಂ.ರುದ್ರಕುಮಾರ್ ಯವರು “ಎನ್ನೆಂಸಿಯಲ್ಲಿ ಆಗಿರುವ ಉದ್ಯೋಗಮೇಳದ ಕುರಿತು ಮಾಹಿತಿ ಸಭೆಯ ಮುಂದಿಟ್ಟರು.
ಕೆ.ವಿ.ಜಿ. ಐಟಿಐ ಪ್ರಾಂಶುಲಾಲ ದಿನೇಶ್ ಮಡ್ತಿಲ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.







