ಸಂಪಾಜೆ : ಪ್ರಾಕೃತಿಕ ವಿಕೋಪ ಟಾಸ್ಕ್ ಫೋರ್ಸ್ ಸಮಿತಿ‌ ಸಭೆ

0

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ.. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಪ್ರಾಕೃತಿಕ ವಿಕೋಪ ಟಾಸ್ಕ್ ಪೋರ್ಸ್ ಸಮಿತಿ ಸಭೆಯು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.

ಸಂಪಾಜೆ ಹೊಳೆಯ ಹೂಳು ಎತ್ತುವ ಬಗ್ಗೆ, ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಸಮಿತಿ ರಚಿಸಲಾಯಿತು. ತುರ್ತು ಸಂದರ್ಭದಲ್ಲಿ ಬೇಕಾದ ಅಗತ್ಯ ಸಾಮಾಗ್ರಿ, ಸಂತ್ರಸ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಬಗ್ಗೆ ಸಭೆಯಲ್ಲಿ ಅಪಾಯಕಾರಿ ಮರಗಳ ತೆರವು, ಕಳೆದ ಬಾರಿ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಕಂತಿನ ಹಣ ಬರದಿರುವ ಬಗ್ಗೆ ಚರ್ಚೆ ನಡೆಯಿತು.


ನೋಡೆಲ್ ಅಧಿಕಾರಿ ವಲಯ ಅರಣ್ಯ ಅಧಿಕಾರಿ ಮಂಜುನಾಥ್, ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ, ಗ್ರಾಮ ಕರಣಿಕರಾದ ಮಿಯಾ ಸಾಬ್ ಮುಲ್ಲಾ, ಸಂಪಾಜೆ ಸೊಸೈಟಿ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ, ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ಅಬೂಸಾಲಿ, ಎಸ್. ಕೆ. ಹನೀಫ್, ಸವಾದ್ ಗೂನಡ್ಕ, ವಿಮಲಾ ಪ್ರಸಾದ್, ವಿಜಯ ಕುಮಾರ್ ಆಲಡ್ಕ, ರಿಕ್ಷಾ ಯೂನಿಯನ್ ಅಧ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ, ಯುವಕ ಮಂಡಲದ ಸುಧಾಕರ್, ಧರ್ಮಸ್ಥಳ ಸೌರ್ಯ ತಂಡದ ಚಿದಾನಂದ, ಭಾರತಿ, ಸವಿತಾ ಆಶಾ ಕಾರ್ಯಕರ್ತರಾದ ಸವಿತಾ ರೈ ಪ್ರೇಮಲತಾ, ಸೌಮ್ಯ, ಪೊಲೀಸ್ ಹೊರಠಾಣೆ ಅದಿಕಾರಿ ನಾಗೇಶ್, ಕಮ್ಯುನಿಟಿ ಹೆಲ್ತ್ ಆಫೀಸರ್ ಹರ್ಷಿತ ಗ್ರಾಮ ಪಂಚಾಯತ್ ನ ಉಮೇಶ್, ಹರ್ಷಿತ್ ಹಾಗೂ ಪಂಚಾಯತ್ ಪಂಪ್ ಚಾಲಕರಾದ ಗಣೇಶ್ ಗೂನಡ್ಕ, ರಾಜೇಶ್ ಸಂಪಾಜೆ, ಗಣೇಶ್ ಆಲಡ್ಕ, ಚಂದ್ರಶೇಖರ ಕಡೆಪಾಲ, ಹಸೈನಾರ್ ದೊಡ್ಡಡ್ಕ, ತಾಹಿರ, ಪಂಚಾಯತ್ ಕಾರ್ಯದರ್ಶಿ ಪದ್ಮಾವತಿ ಉಪಸ್ಥಿತರಿದ್ದರು.