ದಾವಣಗೆರೆ ಜಿಲ್ಲೆ ಎಸ್.ಪಿ ಆಗಿ ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಡಿ.ಜಿ ಕಚೇರಿಯಲ್ಲಿದ್ದ ಸಿ.ಬಿ ರಿಷ್ಯಂತ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರ ಎಸ್.ಪಿ.ಯಾಗಿ ನೇಮಿಸಲಾಗಿದೆ.
ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ಎಸ್.ಪಿ. ವಿಕ್ರಮ್ ಅಮ್ಟೆ ಅವರು ರಜೆಯಲ್ಲಿರುವ ಕಾರಣ ರಿಷ್ಯಂತ್ ಅವರು ಪ್ರಭಾರವಾಗಿ ಕರ್ತವ್ಯ ಮಾಡಲು ನಾಳೆ ಹಾಜರಾಗಲು ಸರಕಾರ ಅದೇಶ ಹೊರಡಿಸಿದೆ.
ಸಿ.ಬಿ ರಿಷ್ಯಂತ್ 2013 ಬ್ಯಾಚ್ ಕರ್ನಾಟಕ ಕೆಡರ್ ಐ ಪಿ ಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಪುತ್ತೂರು ಎ.ಎಸ್.ಪಿ.ಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.