ಸುಳ್ಯದಲ್ಲಿ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಸ್ವರ್ಣಶ್ರೀ ಫೈನಾನ್ಸ್ ಬೆಳೆದು ಇದೀಗ ಸ್ವರ್ಣಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯಾಗಿ ಮುಂದಡಿಯಿಟ್ಟಿದೆ.
ಸೊಸೈಟಿ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಪ್ರವರ್ತಕ ಮಂಡಳಿ ರಚನೆಯಾಗಿ ಬಳಿಕ ನೂತನ ಆಡಳಿತ ಮಂಡಳಿಯ ರಚನೆಯಾಗಿದೆ. ಜೂ. 16ರಂದು ನೂತನ ಆಡಳಿತ ಮಂಡಳಿಯ ಪ್ರಕ್ರಿಯೆ ನಡೆದು 14 ಮಂದಿ ನಿರ್ದೇಶಕರ ಆಯ್ಕೆ ನಡೆದಿತ್ತು.
ನಿರ್ದೇಶಕರಾಗಿ ಜನಾರ್ಧನ ಡಿ, ಸತ್ಯನಾರಾಯಣ ಅಚ್ರಪ್ಪಾಡಿ, ರಾಘವ ಗೌಡ ಎಂ, ಪ್ರಭಾಕರನ್ ನಾಯರ್, ಪ್ರಕಾಶ್ ಕೆ, ಶ್ರೀಮತಿ ಭವಾನಿ ಬಿ.ಆರ್, ಶ್ರೀಮತಿ ಹರ್ಷಿತಾ ಎನ್.ಪಿ, ಸಚಿನ್ ಕುಮಾರ್ ಬಿ.ಎನ್, ಸತೀಶ್ ಕೆ.ಜಿ, ಮಹೇಶ್ ಎಂ.ಆರ್, ದೀಕ್ಷಿತ್ ಕುಮಾರ್ ಪಿ ಮತ್ತು ವೃತ್ತಿಪರ ನಿರ್ದೇಶಕರುಗಳಾಗಿ ಆನಂದ ಖಂಡಿಗ, ಡಾ. ಪುರುಷೋತ್ತಮ ಕೆ.ಜಿ ಹಾಗೂ ಧರ್ಮಪಾಲ ಕೆ ಅವಿರೋಧ ಆಯ್ಕೆಯಾದರು. ಇದಾದ ಬಳಿಕ ಜೂ. 23ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿ ಜೂ. 24ರಂದು ಅಧಿಕಾರ ವಹಿಸಿಕೊಂಡರು. ನೂತನ ಅಧ್ಯಕ್ಷರಾಗಿ ಜನಾರ್ಧನ ಡಿ, ಉಪಾಧ್ಯಕ್ಷರಾಗಿ ಸತ್ಯನಾರಾಯಣ ಅಚ್ರಪ್ಪಾಡಿ ಅವಿರೋಧ ಆಯ್ಕೆಯಾದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಶ್ವತ್ ಬಿಳಿಮಲೆ ಕರ್ತವ್ಯ ನಿರ್ವಹಿಸಲಿದ್ದಾರೆ.