ಆಲೆಟ್ಟಿ ಗ್ರಾಮದ ಮೊರಂಗಲ್ಲು ಕಾಲನಿ ನಿವಾಸಿ ಅಂಗಾರ ಎಂ. ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಮನೆಯಲ್ಲಿ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಆಲೆಟ್ಟಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುಂದರಿ ಮೊರಂಗಲ್ಲು ಹಾಗೂ ಇಬ್ಬರು ಪುತ್ರರಾದ ಶಿವಪ್ರಸಾದ್ ಮೊರಂಗಲ್ಲು, ಶಿವರಂಜನ್ ಮೊರಂಗಲ್ಲು, ಸಹೋದರರಾದ ಪೊಡಿಯ, ಗುರುವ,
ಸಹೋದರಿಯರಾದ ಶ್ರೀಮತಿ ಮಿನ್ಕು,ಶ್ರೀಮತಿ ಗುಬ್ಬಿ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.
.
ಮೃತರು ಕಳೆದ 2018 ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.