ಅರಂತೋಡು ಗ್ರಾಮದ ಮೇಲಡ್ತಲೆ ಪ್ರೇಮನಾಥರವರು ಅಸೌಖ್ಯದಿಂದ ಇಂದು ನಿಧನರಾದರು.
ಮೃತರು ಅವಿವಾಹಿತರಾಗಿದ್ದು, ಸಹೋದರ ಪುರುಷೋತ್ತಮ, ಸಹೋದರಿಯರಾದ ವೆಂಕಮ್ಮ, ಪದ್ಮಾವತಿ, ವಿಶಾಲಾಕ್ಷಿ, ವಸಂತಿ, ರವಿಕಲ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಇವರು ಹಲವು ವರ್ಷಗಳ ಹಿಂದೆ ಮರದಿಂದ ಬಿದ್ದು ಅನಾರೋಗ್ಯದಿಂದ ಇದ್ದರು. ನಂತರ ಚೇತರಿಸಿಕೊಂಡಿದ್ದು, ಇತ್ತೀಚೆಗೆ ಪುನಹ ಅಸೌಖ್ಯಕ್ಕೊಳಗಾಗಿದ್ದರು.